Wednesday, October 14, 2026

Dasara Wishes

Strengthening DasraWishes_JK DasraWishes JK
Happy Dasara
Home Cinema ಅಕ್ಟೋಬರ್ 14 ರಂದು ಶ್ರೀಕೃಷ್ಣಅಟ್ ಜಿಮೇಲ್ ಡಾಟ್ ಕಾಮ್ ರಿಲೀಸ್

ಅಕ್ಟೋಬರ್ 14 ರಂದು ಶ್ರೀಕೃಷ್ಣಅಟ್ ಜಿಮೇಲ್ ಡಾಟ್ ಕಾಮ್ ರಿಲೀಸ್

ಬೆಂಗಳೂರು, ಸೆಪ್ಟೆಂಬರ್ 20, 2021 (www.justkannada.in): ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ನಟನೆಯ ಶ್ರೀಕೃಷ್ಣಅಟ್ ಜಿಮೇಲ್ ಡಾಟ್ ಕಾಮ್ ಚಿತ್ರ ಅಕ್ಟೋಬರ್ 14 ರಂದು ರಿಲೀಸ್ ಆಗಲಿದೆ.

ನಾಗಶೇಖರ್ ನಿರ್ದೇಶನದಲ್ಲಿ ಸಂದೇಶ್ ಪ್ರೊಡಕ್ಷನ್ ನಿರ್ಮಾಣದ ಈ ಸಿನಿಮಾವನ್ನು ಜಯಣ್ಣ ಸಿನಿಮಾ ಹಂಚಿಕೆ ಮಾಡುತ್ತಿದ್ದು, ಕನ್ನಡ ಮತ್ತು ಮಲಯಾಳಂ ನಲ್ಲಿ ರಿಲೀಸ್ ಆಗಲಿದೆ.

ಸರ್ಕಾರ ಶೇ, 50 ರಷ್ಟು ಸೀಟು ಭರ್ತಿ ಗೆ ಅವಕಾಶ ನೀಡಿರುವುದರ ಬೆನ್ನಲ್ಲೇ ಸಿನಿಮಾ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ, ಚಿತ್ರ ತಂಡ ಸಿನಿಮಾ ಪ್ರಮೋಷನ್ ಆರಂಭಿಸಲಿದೆ. ವಿವಾಹೇತರ ಸಂಬಂಧ ಮತ್ತು ಲಿವ್ ಇನ್ ರಿಲೇಷನ್ ಶಿಪ್ ಗಳ ಬಗ್ಗೆ ಕತೆ ಹೆಣೆಯಲಾಗಿದೆ.

ಅರ್ಜುನ್ ಜನ್ಯ ಸಂಗೀತ ನೀಡಿದ್ದು ಸತ್ಯ ಹೆಗಡೆ ಛಾಯಾಗ್ರಾಹಣವಿದೆ, ಸಿನಿಮಾದಲ್ಲಿ ದತ್ತಣ್ಣ ಪ್ರಮುಖ ಪಾತ್ರದಲ್ಲಿ ನಟಸಿದ್ದಾರೆ. ಮೊದಲ ಬಾರಿಗೆ ಭಾವನಾ ಮತ್ತು ಕೃಷ್ಣ ತೆರೆ ಹಂಚಿಕೊಳ್ಳುತ್ತಿದ್ದಾರೆ.

key words: Srikrishna at Gmail dot com release on October 14th