Wednesday, October 14, 2026

Dasara Wishes

Happy Dasara
Home Cinema ‘ಪುಕ್ಸಟ್ಟೆ ಲೈಫು’ ಪ್ರಮೋಷನ್’ಗೆ ಕನ್ನಡ ಸಿನಿ ದಿಗ್ಗಜರ ಜೊತೆ ಬಂದ ಸಂಚಾರಿ ವಿಜಯ್

‘ಪುಕ್ಸಟ್ಟೆ ಲೈಫು’ ಪ್ರಮೋಷನ್’ಗೆ ಕನ್ನಡ ಸಿನಿ ದಿಗ್ಗಜರ ಜೊತೆ ಬಂದ ಸಂಚಾರಿ ವಿಜಯ್

ಬೆಂಗಳೂರು, ಸೆಪ್ಟೆಂಬರ್ 20, 2021 (www.justkannada.in): ಹೊಸ ಎನಿಮೇಟೆಡ್​ ವಿಡಿಯೋ ಮೂಲಕ ನಟ ಸಂಚಾರಿ ವಿಜಯ್ ಅವರ ಪುಕ್ಸಟ್ಟೆ ಲೈಫು ಚಿತ್ರದ ಪ್ರಮೋಷನ್ ವೀಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

ವಿಡಿಯೋದಲ್ಲಿ ಸಂಚಾರಿ ವಿಜಯ್​ ಅವರು ಸ್ವರ್ಗದಲ್ಲಿಸ್ಯಾಂಡಲ್​ವುಡ್​ ಹಿರಿಯ ನಟರ ಜತೆ ಮಾತನಾಡಿದ್ದಾರೆ. ಪುಕ್ಸಟ್ಟೆ ಲೈಫು ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಹರಸಬೇಕೆಂದು ಕೋರಿದ್ದಾರೆ.

ರಾಜ್​ಕುಮಾರ್​, ಅಂಬರೀಷ್​, ವಿಷ್ಣುವರ್ಧನ್​, ಶಂಕರ್​ನಾಗ್​ ಸೇರಿ ಹಲವು ಹಿರಿಯ ನಟರೂ ವಿಜಯ್​ ಜತೆ ಸಂಭಾಷಣೆ ನಡೆಸಿದ ಎನಿಮೇಟೆಡ್​ ವಿಡಿಯೋ ಮಾಡಲಾಗಿದೆ.

ಸ್ವರ್ಗದಲ್ಲೇ ಸಂಚಾರಿ ವಿಜಯ್​ ‘ಪುಕ್ಸಟ್ಟೆ ಲೈಫು’ ಬಗ್ಗೆ ಹೇಳಿಕೊಳ್ಳುತ್ತಾರೆ. ಅಂಬರೀಷ್​, ರಾಜ್​ಕುಮಾರ್​ ಮೊದಲಾದವರು ಸಿನಿಮಾ ನೋಡಿ ಎಂದು ಕೋರಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.

key words: sanchari vijay movie puksatte lifu animated promotional video released