Tuesday, September 22, 2026

BDA Apartments

ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ; ಎಂ.ಲಕ...
Home Front Page ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ; ಎಂ.ಲಕ್ಷ್ಮಣ್.

ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ; ಎಂ.ಲಕ್ಷ್ಮಣ್.

ಮೈಸೂರು,ಡಿಸೆಂಬರ್,19,2024 (www.justkannada.in): ಸ್ನೇಹಮಯಿ ಕೃಷ್ಣ ನಿನ್ನೆ ಗಂಭೀರ ಆರೋಪ‌ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳು ಆಮಿಷ ಒಡ್ಡಲು ಬಂದಿದ್ದರು ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದರೆ ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ಅವರು ಇಬ್ಬರು ಹಣದ ಆಮಿಷ ಒಡ್ಡಲು ಬಂದಿದ್ದರು ಎಂದು ಆರೋಪಿಸಿದ್ದಾರೆ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒಂದು ಹಸಿ ಸುಳ್ಳಿನ ಪತ್ರ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಅವರ ಪತ್ನಿ ಯಾವುದೇ ಕಾರಣಕ್ಕೂ ಅಂತಹ ಮಟ್ಟಕ್ಕೆ ಇಳಿಯುವವರಲ್ಲ. ಆಮಿಷಕ್ಕೆ ಒಳಗಾಗದಿದ್ದರೇ ಸ್ನೇಹಮಯಿ ಕೃಷ್ಣ ಪುತ್ರ ಏಕೆ ಹರ್ಷ ಮತ್ತು ಶ್ರೀನಿಧಿ ಜೊತೆ ಹೋದರು. ಅವರು ಕೊಟ್ಟಿರುವುದು ಬೆಳಿಗ್ಗೆ 10:30ರ ಫುಟೇಜ್ ಮಾತ್ರ. ಅಂದಿನ ಇಡೀ ದಿನದ ಫುಟೇಜ್ ಕೊಡಬೇಕು. ನಮ್ಮ ಬಳಿಯೂ ಕೆಲವು ಫುಟೇಜ್ ಗಳಿವೆ. ಅವನ್ನು ನಾವು ಪೊಲೀಸರಿಗೆ ಕೊಡುತ್ತೇವೆ ಎಂದರು.

ನೀವು ಯಾರ ಬಳಿಯೂ, ಯಾರ ಆಮೀಷಕ್ಕೆ ಒಳಗಾಗಿಲ್ವಾ? ನಿಮ್ಮ ಕೋರ್ಟ್ ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತೆ.? ಬೆಂಗಳೂರಿನಲ್ಲಿ ನಿಮಗೆ ಪ್ರತ್ಯೇಕ ರೂಂ ಒದಗಿಸಿಕೊಟ್ಟಿಲ್ವಾ.? ನಿಮಗೆ ದೊಡ್ಡ ಹೋಟೆಲ್ ನಲ್ಲಿ ಉಳಿದುಕೊಳ್ಳಲು ರೂಂ ವ್ಯವಸ್ಥೆ ಮಾಡಿರುವರು ಯಾರು ಅಂತ ಗೊತ್ತು. ನೀವು ಯಾವಾಗ ದೆಹಲಿಗೆ ಹೋಗಿದ್ದು ಎಲ್ಲ ಗೊತ್ತು. ಸ್ನೇಹಮಯಿ ಕೃಷ್ಣ ಈ ಸಿನಿಮಾದಲ್ಲಿ ಕೇವಲ ಸೈಡ್ ಆಕ್ಟರ್ ಅಷ್ಟೇ. ಡೈರೆಕ್ಟರ್, ನಿರ್ಮಾಪಕರೇ ಬೇರೆ ಇದಾರೆ ಎಂದು  ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಅಮಿತ್ ಶಾ, ನರೇಂದ್ರ ಮೋದಿಯವರ ದುರಹಂಕಾರದ ಪರಮಾವಧಿ ಇದು

ಬಿಆರ್  ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ವಿರುದ್ಧ ಕಿಡಿಕಾರಿದ  ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್, ಅಮಿತ್ ಶಾ, ನರೇಂದ್ರ ಮೋದಿಯವರ ದುರಹಂಕಾರದ ಪರಮಾವಧಿ ಇದು. ನೀವು ಕೊಟ್ಟಿರುವ ಹೇಳಿಕೆ ಸರ್ಕಾರಿ ಚಾನೆಲ್ ನಲ್ಲೇ ಪ್ರಚಾರವಾಗಿರುವುದು ಬೇರೆ ಖಾಸಗಿ ಚಾನೆಲ್ ಪ್ರಸಾರ ಮಾಡಿಲ್ಲ. ಅಂಬೇಡ್ಕರ್ ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೇರಿದವರಲ್ಲ. ಅಂಬೇಡ್ಕರ್ ಸಂವಿಧಾನ ಇಲ್ಲ ಅಂದಿದ್ರೆ ಅಮಿತ್ ಶಾ ಗುಜರಿ ವ್ಯಾಪಾರ ಮಾಡುತ್ತಿದ್ದರು. ಮೋದಿ ಎಲ್ಲೋ ಟೀ ಮಾಡಿಕೊಂಡಿರುತ್ತಿದ್ದರು ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಸತ್ಯಾವಾಗಿದೆ. ಇದೆಲ್ಲ ಬಿಜೆಪಿ ಅವರ ಮನಸ್ಥಿತಿ ಏನು ಎಂಬುದನ್ನು ತಿಳಿಯುತ್ತದೆ.400 ಸೀಟು ಬಂದರೆ ಇಡೀ ಸಂವಿಧಾನವನ್ನೇ ಬದಲಾವಣೆ ತರುತ್ತೇವೆ ಎನ್ನುತ್ತಾರೆ. ಅಂಬೇಡ್ಕರ್ ಅವರು ನಮ್ಮ ಫ್ಯಾಷನ್, ಅಂಬೇಡ್ಕರ್ ಅವರು ನಮ್ಮ ಮೋಟಿವೇಷನ್ ಎಂದು ಹರಿಹಾಯ್ದರು.

Key words: funding, Snehamayi Krishna,  M. Lakshman, Mysore