SIR ವಿಚಾರದಲ್ಲೂ MES ಖ್ಯಾತೆ: ಕನ್ನಡದಲ್ಲಿ ಅರ್ಜಿ ಕೊಟ್ಟಿದ್ದಕ್ಕೆ ಬಿಎಲ್ ಒಗಳನ್ನ ವಾಪಸ್ ಕಳಿಸಿದ ಮುಖಂಡ

ಬೆಳಗಾವಿ,ಜುಲೈ,1,2026 (www.justkannada.in):  ಬೆಳಗಾವಿಯಲ್ಲಿ ಎಂಇಎಸ್  ಮುಖಂಡರ ಪುಂಡಾಟಿಕೆ ಮತ್ತೆ ಮುಂದುವರೆದಿದ್ದು ಎಸ್ ಐಆರ್ ವಿಚಾರದಲ್ಲೂ ಇದೀಗ ಕ್ಯಾತೆ ತೆಗೆದಿದ್ದಾರೆ.

ಮರಾಠಿಯಲ್ಲಿ ಅರ್ಜಿ ಕೊಡದೇ ಕನ್ನಡದಲ್ಲಿ ಅರ್ಜಿ ಕೊಟ್ಟಿದ್ದಕ್ಕೆ ಎಂಎಸ್ ಮುಖಂಡರೊಬ್ಬರು ಬಿಎಲ್ ಒಗಳನ್ನೇ ವಾಪಸ್ ಕಳಿಸಿದ್ದಾರೆ. ಬೆಳಗಾವಿಯ ಬಾಂದೂರ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಎಂಇಎಸ್ ಮುಖಂಡ ಸುನೀಲ್ ಬಾಳೇಕುಂದ್ರಿ ಎಂಬಾತ ಈ ರೀತಿ ಕ್ಯಾತೆ ತೆಗೆದಿದ್ದಾರೆ.

ಮರಾಠಿಯಲ್ಲಿ ಅರ್ಜಿಗಳಿಲ್ಲದಿದ್ದಕ್ಕೆ ಕನ್ನಡದಲ್ಲಿದ್ದ ಅರ್ಜಿಗಳನ್ನ ಸುನೀಲ್ ಬಾಳೇಕುಂದ್ರಿ ತಿರಸ್ಕರಿಸಿದ್ದು ಎಂಇಎಸ್ ಮುಖಂಡರ ಪುಂಡಾಟಕ್ಕೆ ಬಿಎಲ್ ಒ ಅಧಿಕಾರಿಗಳು ಸುಸ್ತಾಗಿದ್ದಾರೆ.

Key words:  SIR, MES Leader, BLOs, Kannada