Tuesday, September 15, 2026

BDA Apartments

ಪದಕದೊಂದಿಗೆ ತವರಿಗೆ ಬಂದ ಸಿಂಧುಗೆ ಅದ್ಧೂರಿ ಸ್ವಾಗತ ! BDA JK_Adv BDA Adv
Home Front Page ಪದಕದೊಂದಿಗೆ ತವರಿಗೆ ಬಂದ ಸಿಂಧುಗೆ ಅದ್ಧೂರಿ ಸ್ವಾಗತ !

ಪದಕದೊಂದಿಗೆ ತವರಿಗೆ ಬಂದ ಸಿಂಧುಗೆ ಅದ್ಧೂರಿ ಸ್ವಾಗತ !

ಬೆಂಗಳೂರು, ಆಗಸ್ಟ್ 4, 2021 (www.justkannada.in): ಕಂಚಿನ ಪದಕದೊಂದಿಗೆ ಸ್ವದೇಶಕ್ಕೆ ಆಗಮಿಸಿದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧುಗೆ ಸರ್ಕಾರದಿಂದ ಅದ್ದೂರಿ ಸ್ವಾಗತ ಸಿಕ್ಕಿದೆ.

ಭಾರತಕ್ಕೆ ಸತತ ಎರಡು ಒಲಿಂಪಿಕ್ ಪದಕ ಗಳಿಸಿರುವ ಮೊದಲ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಸ್ವದೇಶಕ್ಕೆ ಆಗಮಿಸಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅಲ್ಲಿ ಜಮಾಯಿಸಿದವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಸಿಂಧು ಮತ್ತು ಅವರ ಕೊರಿಯಾದ ಕೋಚ್ ಪಾರ್ಕ್ ತೈ-ಸ್ಯಾಂಗ್ ಅವರನ್ನು ಸಹ ಸಿಂಘಾನಿಯಾ ವಿಮಾನ ನಿಲ್ದಾಣದಲ್ಲಿ ಪ್ರೀತಿಯಿಂದ ಬರಮಾಡಿಕೊಂಡರು.