Thursday, August 13, 2026

BDA Apartments

Home Front Page ಸಚಿವ ಶ್ರೀರಾಮುಲು ಬಳಿ ಸಿದ್ಧರಾಮಯ್ಯ ಕ್ಷಮೆಯಾಚಿಸಲಿ- ಎಂಎಲ್ ಸಿ ರವಿಕುಮಾರ್ ಆಗ್ರಹ.

ಸಚಿವ ಶ್ರೀರಾಮುಲು ಬಳಿ ಸಿದ್ಧರಾಮಯ್ಯ ಕ್ಷಮೆಯಾಚಿಸಲಿ- ಎಂಎಲ್ ಸಿ ರವಿಕುಮಾರ್ ಆಗ್ರಹ.

ಕಲ್ಬುರ್ಗಿ,ಅಕ್ಟೋಬರ್,17,2022(www.justkannada.in):  ಸಾರಿಗೆ ಸಚಿವ ಶ್ರೀರಾಮುಲು ಅವರನ್ನ ಪೆದ್ಧ ಎಂದ ವಿಪಕ್ಷ ನಾಯಕ ಸಿದ್ಧರಾಮಯ್ಯ ಕ್ಷಮೆಯಾಚಿಸಲು ವಿಧಾನಪರಿಷತ್ ಸದಸ್ಯ ಎನ್.ರವಿ ಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಎಂಎಲ್ ಸಿ ರವಿ ಕುಮಾರ್,  ಸಿದ್ಧರಾಮಯ್ಯ ತಾವು ಮಾತ್ರ ಜಾಣ ಅಂದುಕೊಂಡಿದ್ದಾರೆ.  ಉಳಿದವರೆಲ್ಲರೂ ಅಪ್ರಬುದ್ಧರಾ..?  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಬಾದಾಮಿ ಕ್ಷೇತ್ರದಲ್ಲಿ 1000 ಮತಗಳ ಅಂತರದಲ್ಲಿ ಗೆದ್ಧಿದ್ಧಾರೆ. ಶ್ರೀರಾಮುಲು ಬಳಿ ಸಿದ್ಧರಾಮಯ್ಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕಿಸಿದ ರವಿಕುಮಾರ್, ರಾಹುಲ್ ಭಾರತ ಜೋಡೋ ಯಾತ್ರೆ ಅಲ್ಲ. ಕಾಂಗ್ರೆಸ್ ತೋಡೊ ಯಾತ್ರೆ  ಗೋವಾದಲ್ಲಿ ಶಾಸಕರು ಕಾಂಗ್ರೆಸ್ ತೊರೆದ ಬಿಜೆಪಿ ಸೇರಿದ್ದಾರೆ.  ಗುಲಾಂ  ನಬಿ ಅಜಾದ್ ಪಕ್ಷ ಬಿಟ್ಟರು.  ಹೀಗಾಗಿ  ಭಾರತ್ ಜೋಡೋ ಯಾತ್ರೆ ಅಲ್ಲ. ಅದು ತೋಡೋ ಯಾತ್ರೆ ಎಂದರು.

Key words: Siddaramaiah– Minister- Sriramulu-MLC- Ravikumar