Sunday, September 6, 2026

BDA Apartments

Home Front Page ಅಂದು ಸಿದ್ಧರಾಮಯ್ಯ ಸರ್ಕಾರ ಪಿಎಫ್ ಐ ಕಾರ್ಯಕರ್ತರ ಮೇಲೆ ಕೇಸ್ ವಾಪಸ್ ಪಡೆಯದಿದ್ರೆ ಇಂದು ಇಂತಹ...

ಅಂದು ಸಿದ್ಧರಾಮಯ್ಯ ಸರ್ಕಾರ ಪಿಎಫ್ ಐ ಕಾರ್ಯಕರ್ತರ ಮೇಲೆ ಕೇಸ್ ವಾಪಸ್ ಪಡೆಯದಿದ್ರೆ ಇಂದು ಇಂತಹ ಘಟನೆ ನಡೆಯುತ್ತಿರಲಿಲ್ಲ- ಗೃಹ ಸಚಿವ ಅರಗ ಜ್ಞಾನೇಂದ್ರ.

ಶಿವಮೊಗ್ಗ,ಜುಲೈ,30,2022(www.justkannada.in ಕಾಂಗ್ರೆಸ್ ಸರ್ಕಾರ ಮಾಡಿ ಇಟ್ಟು ಹೋಗಿರುವ ಪ್ರಸಾದ ಇದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾವಿರಾರು ಪಿಎಫ್ ಐ ಕಾರ್ಯಕರತರ ಮೇಲಿನ ಕೇಸ್ ವಾಪಸ್ ಪಡೆದಿತ್ತು. ಅಂದು ಕ್ರಮ ಕೈಗೊಂಡಿದ್ರೆ ಇವು ಯಾವೂ ನಡೆಯುತ್ತಿರಲಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಅವರಿಗೆ ಕಾಯ್ದೆ, ಕಾನೂನು ಸಂವಿಧಾನ ಏನು ಅಂತಾ ಗೊತ್ತಿರಲಿಲ್ಲ. ಇವೆಲ್ಲಾ ನಡೆಯಲ್ಲ ಅಂತಾ ಬಿಜೆಪಿ ಸರ್ಕಾರ ಮಾಡಿ ತೋರಿಸಿದೆ. ಹರ್ಷ  , ಹಾಗೂ ಚಂದ್ರು ಕೊಲೆ ಪ್ರಕರಣ, ಹುಬ್ಬಳ್ಳಿ ಗಲಭೆ ವೇಳೆ ತೋರಿಸಿದ್ದೇವೆ. ಪ್ರವೀಣ್ ಹತ್ಯೆ ಸಂಬಂಧ ಗುಪ್ತಚರ ಇಲಾಖೆ ಮಾಹಿತಿ ನೀಡಲಿಲ್ಲ. ನೀಡಿದ್ರೆ ಘಟನೆ ನಡೆಯುತ್ತಿರುಲಿಲ್ಲ ಎಂದರು.

ಮೃತ ಫಾಜಿಲ್ ಮನೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಅರಗ ಜ್ಞಾನೇಂದ್ರ, ಮುಸ್ಲಿಮರ ಮನೆಗೆ ಹೋಗಬಾರದು ಅಂತೇನು ಇಲ್ಲ. ಫಾಜಿಲ್ ಕೊಲೆಯಾದ ದಿನ ರಾತ್ರಿಯಾಗಿತ್ತು ಫ್ಲೈಟ್ ಗೆ ಹೋಗಲು ಸಮಯ ಆಗಿತ್ತು. ಹಾಗಾಗಿ ಭೇಟಿ ನೀಡಲಿಲ್ಲ. ಅವರ ಮನೆಗೆ ಭೇಟಿ ಕೊಟ್ಟರೇ ಏನು ಕಳೆದುಕೊಳ್ಳುವುದಿಲ್ಲ. ಹಂತಕರಿಗೆ ಕಠಿಣ ಶಿಕ್ಷೆಯಾಗುತ್ತೆ ಎಂದರು.

Key words: Siddaramaiah -government – withdrawn -case – PFI workers- Home Minister -Araga Gyanendra.