Saturday, August 15, 2026

BDA Apartments

Home Front Page ಸಿದ್ಧರಾಮಯ್ಯ ಕಟ್ಟಿಹಾಕಲು ಯಾವುದೇ ತಂತ್ರ ಮಾಡಿಲ್ಲ: ಒಳ ಒಪ್ಪಂದ ಅವಶ್ಯಕತೆ ಇಲ್ಲ- ಮಾಜಿ ಸಿಎಂ ಹೆಚ್.ಡಿ...

ಸಿದ್ಧರಾಮಯ್ಯ ಕಟ್ಟಿಹಾಕಲು ಯಾವುದೇ ತಂತ್ರ ಮಾಡಿಲ್ಲ: ಒಳ ಒಪ್ಪಂದ ಅವಶ್ಯಕತೆ ಇಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ನವೆಂಬರ್,14,2022(www.justkannada.in): ಸಿದ್ಧರಾಮಯ್ಯರನ್ನ  ಕಟ್ಟಿಹಾಕಲು  ಜೆಡಿಎಸ್-ಬಿಜೆಪಿ ನಡುವೆ ಒಳ  ಒಪ್ಪಂದ ಇಲ್ಲ. ಸಿದ್ಧರಾಮಯ್ಯರನ್ನ ಕಟ್ಟಿಹಾಕಲು ಯಾವುದೇ ತಂತ್ರ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮುಂದಿನ ಚುನಾವಣೆಗೆ ಯಾರ ಜೊತೆಯೂ  ಒಪ್ಪಂದ ಮಾಡುವ ಅವಶ್ಯಕತೆ ಇಲ್ಲ. ಕುತಂತ್ರ ರಾಜಕಾರಣ ಮಾಡೋಕೆ ನಾವು ಹೋಗಲ್ಲ. ಬಿಜೆಪಿಯವರಂತೆ ನಾವು ಲಘುವಾಗಿ ಮಾತನಾಡಲ್ಲ. ಚುನಾವಣೆಯಲ್ಲಿ ಸೋತಿದ್ದೇವೆ. ಸೋಲು ಗೆಲುವು ಸಹಜ ಎಂದರು.

ನಾವು ಸಿದ್ಧರಾಮಯ್ಯರನ್ನ ಸೋಲಿಸುತ್ತೇವೆ ಎಂದು ಹೇಳಿಲ್ಲ. ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆ ಮಾತನಾಡಲ್ಲ. ಎಲ್ಲಿ ಬೇಕಾದರೂ ಸ್ಪರ್ಧಿಸುವ ಶಕ್ತಿ ಇದೆ ಎಂದರು.

Key words: Siddaramaiah –bjp-jds-alliance-Former CM -HD Kumaraswamy.