Saturday, August 15, 2026

BDA Apartments

Home Front Page ಯಲ್ಲಾಪುರಕ್ಕೆ ವಿಶೇಷ ಅನುದಾನ ನೀಡುವಂತೆ ಸಿಎಂ ಬಿಎಸ್ ವೈಗೆ ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಪತ್ರ…

ಯಲ್ಲಾಪುರಕ್ಕೆ ವಿಶೇಷ ಅನುದಾನ ನೀಡುವಂತೆ ಸಿಎಂ ಬಿಎಸ್ ವೈಗೆ ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಪತ್ರ…

ಉತ್ತರ ಕನ್ನಡ,ಆ,9,2019(www.justkannada.in): ಅತಿವೃಷ್ಟಿಯಿಂದ ಹಾನಿಗೊಳ್ಳಗಾಗಿರುವ ಯಲ್ಲಾಪುರಕ್ಕೆ ವಿಶೇಷ ಅನುದಾನ ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ  ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಪ್ರವಾಹಕ್ಕೀಡಾಗಿರುವ ಯಲ್ಲಾಪುರ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಶಿವರಾಂ ಹೆಬ್ಬಾರ್  ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ  ಬರೆದಿದ್ದಾರೆ.

ಶಿವಾರಂ ಹೆಬ್ಬಾರ್ ಎರಡು ಪ್ರತ್ಯೇಕ ಪತ್ರ ಬರೆದಿದ್ದು, ಜೊತೆಗೆ ಉತ್ತರ ಕನ್ನಡ ಜಿಲ್ಲೆಗೂ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.

Key words: Shivaram Hebbar -letter – CM BS Yeddyurappa- special -grant -Yellapur