Tuesday, September 22, 2026

BDA Apartments

ಷರಿಯಾ ಕಾನೂನು ಬೇಕಂದ್ರೆ ಪಾಕಿಸ್ತಾನಕ್ಕೆ ಹೋಗಿ-ಸಚಿವ ಜಮೀರ್ ವಿರುದ್ದ ಸಿಟಿ ...
Home Front Page ಷರಿಯಾ ಕಾನೂನು ಬೇಕಂದ್ರೆ ಪಾಕಿಸ್ತಾನಕ್ಕೆ ಹೋಗಿ-ಸಚಿವ ಜಮೀರ್ ವಿರುದ್ದ ಸಿಟಿ ರವಿ ಕಿಡಿ

ಷರಿಯಾ ಕಾನೂನು ಬೇಕಂದ್ರೆ ಪಾಕಿಸ್ತಾನಕ್ಕೆ ಹೋಗಿ-ಸಚಿವ ಜಮೀರ್ ವಿರುದ್ದ ಸಿಟಿ ರವಿ ಕಿಡಿ

ಬೆಂಗಳೂರು,ಅಕ್ಟೋಬರ್,29,2024 (www.justkannada.in): ರಾಜ್ಯದಲ್ಲಿ ಷರಿಯಾ ಕಾನೂನು ಇಲ್ಲ.  ಸಂವಿಧಾನ ಪ್ರಕಾರ ಕಾನೂನು ನಡೆಯುತ್ತಿದೆ. ಷರಿಯಾ ಕಾನೂನು ಬೇಕೆಂದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ವಿಧಾನಪರಿಷತ್ ಸದಸ್ಯ ಸಿಟಿ ರವಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ರಾಜ್ಯದಲ್ಲಿ ಸಂವಿಧಾನ  ಪ್ರಕಾರ ಕಾನೂನು ನಡೆಯುತ್ತಿದೆ ಷರಿಯಾ ಕಾನೂಣು ಬೇಕಂದರೆ ಜಮೀರ್ ಸೇರಿದಂತೆ ಪಾಕ್ ಗೆ ಹೋಗಿ. ಸಂವಿಧಾನ ಮುಖ್ಯ  ಅನ್ನೋರು ಕಾನೂನು ಪ್ರಕಾರ ಇರಿ ಎಂದರು.

ವಖ್ಫ್ ಆಸ್ತಿಗೆ ಕೈ ಹಾಕಿದರೇ ಕ್ರಾಂತಿಯಾಗುತ್ತದೆ ಎಂಬ ಹೇಳಿಕೆ ಸಂವಿಧಾನ ಭಾರತೀಯತೆಗೆ ಹಾಕುವ ಬೆದರಿಕೆ.  ಜಮೀರ್ ಗೆ ಬದ್ಧತೆ  ಇದ್ದರೆ ಕ್ರಿಮಿನಲ್ ಕೇಸ್  ದಾಖಲಿಸಲಿ.   ಅನ್ವರ್ ಮಾಣಿಪ್ಪಾಡಿ ವರದಿ ಆಧರಿಸಿ ಕೇಸ್  ದಾಖಲಿಸಿ  ರಾಜ್ಯದ ನೆಮ್ಮದಿಗೆ ಬೆಂಕಿ ಇಡಬೇಕೆಂಧು ಜಮೀರ್ ರನ್ನು ಮಂತ್ರಿ ಮಾಡಿಕೊಂಡಿದ್ದೀರಾ ಎಂದು ಸಿಟಿ ರವಿ ಕಿಡಿಕಾರಿದರು.

Key words: Sharia Law, Pakistan, Minister, Jameer, CT Ravi