Tuesday, September 22, 2026

BDA Apartments

ಶಾಲೆಗಳ ಶೌಚಾಲಯದ ಸ್ಥಿತಿ ಕರುಣಾಜನಕ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ BDA JK_Adv BDA Adv
Home Front Page ಶಾಲೆಗಳ ಶೌಚಾಲಯದ ಸ್ಥಿತಿ ಕರುಣಾಜನಕ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ.

ಶಾಲೆಗಳ ಶೌಚಾಲಯದ ಸ್ಥಿತಿ ಕರುಣಾಜನಕ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ.

ಬೆಂಗಳೂರು,ಜೂನ್,22,2023(www.justkannada.in): ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ, ಶೌಚಾಲಯಗಳ ಸ್ಥಿತಿಗಳ ಕುರಿತು ರಾಜ್ಯ ಸರ್ಕಾರವನ್ನ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಕೊರತೆ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ರವರಿದ್ದ ವಿಭಾಗೀಯ ಪೀಠ   ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಕಾಲಮಿತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶದ ಅನುಸಾರ ಕೈಗೊಂಡ ಕ್ರಮಗಳ ಬಗ್ಗೆ ಸರ್ಕಾರ ಇಂದು ವರದಿ ಸಲ್ಲಿಸಿದೆ. ವರದಿಯ ಜೊತೆಗೆ ಸಲ್ಲಿಸಲಾಗಿದ್ದ ಶೌಚಾಲಯಗಳ ಫೋಟೋ ಗಮನಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ರವರಿದ್ದ ವಿಭಾಗೀಯ ಪೀಠ  ಶಾಲೆಗಳಲ್ಲಿ ನೀರು, ಶೌಚಾಲಯಗಳ ದುಸ್ಥಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಶಾಲೆಗಳ ಶೌಚಾಲಯದ ಸ್ಥಿತಿ ಕರುಣಾಜನಕ high court

ಶೌಚಾಲಯಗಳ ಫೋಟೋ ನಮ್ಮ ಆತ್ಮಸಾಕ್ಷಿಗೆ ಆಘಾತ ನೀಡುತ್ತಿದೆ. ಶೌಚಾಲಯಗಳು ದುಸ್ಥಿತಿಯಲ್ಲಿವೆ, ಗಿಡಬಳ್ಳಿ ಬೆಳೆದಿವೆ. ಅಧಿಕಾರಿಗಳು ತಮ್ಮ ಮನೆ ಶೌಚಾಲಯವನ್ನೂ ಹೀಗೇ ಇಟ್ಟುಕೊಳ್ಳುತ್ತಾರಾ? ಸರ್ಕಾರ ಸಲ್ಲಿಸಿರುವ ವರದಿ ಬೇಸರದಾಯಕ, ಆಘಾತಕಾರಿಯಾಗಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಕಿಡಿ ಕಾರಿದೆ.

ಕುಡಿಯುವ ನೀರನ್ನು ತಲೆ ಮೇಲೆ ಹೊತ್ತು ತರಲಾಗುತ್ತಿದೆ ಎಂದು ವರದಿಯಲ್ಲಿದೆ. ಕುಡಿಯುವ ನೀರಿನ ಪೂರೈಕೆ ಮಾಡಲೂ ಸರ್ಕಾರಕ್ಕೆ ಸಾಧ್ಯವಿಲ್ಲವೇ. ಮೂಲಭೂತ ಸೌಕರ್ಯ ವಿಲ್ಲದ ಶಾಲೆಗಳಿಂದ ಉತ್ತಮ ಶಿಕ್ಷಣ ಸಾಧ್ಯವೇ? ಎಂಥ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ. ಇಂತಹ ವರದಿ ಸಲ್ಲಿಸುವ ಧೈರ್ಯ ಅಧಿಕಾರಿಗಳಿಗೆ ಹೇಗೆ ಬಂತು? ಇದಕ್ಕೆಲ್ಲಾ ಯಾರು ಜವಾಬ್ದಾರಿ ಯಾರು ಉತ್ತರದಾಯಿ? ಅಧಿಕಾರಿಗಳ ಚಲ್ತಾ ಹೈ ಮನಸ್ಥಿತಿ ಸಹಿಸಲು ಸಾಧ್ಯವಿಲ್ಲ. ಇಂತಹ ಶಾಲೆಗೆ ಅಧಿಕಾರಿಗಳು ತಮ್ಮ ಮಕ್ಕಳನ್ನು ಕಳಿಸುತ್ತಾರಾ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

 2013 ರಲ್ಲಿ ಈ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದಾಗಿನಿಂದಲೂ ರಿಂದ 3 ಸರ್ಕಾರ ಬದಲಾಗಿವೆ. ಆದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸ್ವಲ್ಪವಾದರೂ ಕಾಳಜಿ, ಗಂಭೀರತೆ ಇರಬೇಕು. ಪರಿಸ್ಥಿತಿ ನೋಡಿ ನಮಗೆ ನೋವಾಗಿದೆ, ಖಿನ್ನರಾಗಿದ್ದೇವೆ. ಶಾಲೆಗಳ ಶೌಚಾಲಯದ ಸ್ಥಿತಿ ಕರುಣಾಜನಕವಾಗಿದೆ . ಯಾವ ಪೋಷಕರೂ ಇಂತ ಶಾಲೆಗೆ ಮಕ್ಕಳನ್ನು ಕಳಿಸಲ್ಲ . ಹೆಸರಿಗೆ ಮಾತ್ರ ಶೌಚಾಲಯ ನಿರ್ಮಿಸಲಾಗಿದೆ . ಸರ್ಕಾರದ ವರದಿ ಕೇವಲ ಕಣ್ಣೊರೆಸುವ ತಂತ್ರವಿದ್ದಂತಿದೆ ಎಂದು ಸರ್ಕಾರವನ್ನ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ರಿದ್ದ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

-V.Mahesh kumar

Key words: schools -toilets – pathetic: High Court – State  Govt