ಆಸ್ಪತ್ರೆಗೆ ದಾಖಲಾದ ಸಲ್ಮಾನ್ ಖಾನ್ ಸಹೋದರಿ !

ಬೆಂಗಳೂರು, ಡಿಸೆಂಬರ್ 27, 2019 (www.justkannada.in): ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರನ್ನು ಇಂದು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ಆಯುಷ್ ಶರ್ಮಾ ಬೆಳಗ್ಗೆ ಅರ್ಪಿತಾ ಅವರೊಂದಿಗೆ ಆಸ್ಪತ್ರೆ ತಲುಪಿದ್ದಾರೆ. ವಿಶೇಷವೆಂದರೆ, ಈ ದಿನ ಅರ್ಪಿತಾ ಅವರಿಗೆ ಇಂದೇ ಹೆರಿಗೆ ಆಗಲಿದೆ ಎನ್ನಲಾಗುತ್ತಿದೆ.

ಸಲ್ಮಾನ್ ತನ್ನ 54 ನೇ ಹುಟ್ಟುಹಬ್ಬವನ್ನು ಬಾಂದ್ರಾದಲ್ಲಿರುವ ತನ್ನ ಸಹೋದರ ಸೊಹೈಲ್ ಖಾನ್ ಅವರ ಅಪಾರ್ಟ್ಮೆಂಟ್ನಲ್ಲಿ ಆಚರಿಸಲಿದ್ದಾರೆ ಎಂದು ಹಲವು ದಿನಗಳ ಹಿಂದೆ ವರದಿಯಾಗಿದೆ. ಈ ಬದಲಾವಣೆಯ ಕಾರಣವನ್ನು ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಅವರಿಗೆ ಮೊದಲೇ ತಿಳಿಸಿದ್ದರು ಎನ್ನಲಾಗಿದೆ.