ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ಅವತಾರಕ್ಕೆ ಸಖತ್ ರೆಸ್ಪಾನ್ಸ್

ಬೆಂಗಳೂರು, ಫೆಬ್ರವರಿ 17, 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಚಿತ್ರ ‘ರಾಬರ್ಟ್’ ಸಿನಿಮಾದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬವನ್ನ ಆಚರಿಸಿಕೊಂಡ ದರ್ಶನ್, ಇದೇ ವೇಳೆ ರಾಬರ್ಟ್ ಟೀಸರ್ ಬಿಡುಗಡೆ ಮಾಡಿ, ಅಭಿಮಾನಿಗಳಿಗೆ ಉಡುಗೊರೆ ನೀಡಿದರು. ಟೀಸರ್ ನಲ್ಲಿ ಖಡಕ್ ಲುಕ್ಕು, ಡೈಲಾಗ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ರಾಬರ್ಟ್ ಇಲ್ಲಿ ರಾಮನೂ ಆಗಿದ್ದಾರೆ, ರಾಮಣನೂ ಆಗಿದ್ದಾರೆ. ಟೀಸರ್ ಕ್ವಾಲಿಟಿ, ಮೇಕಿಂಗ್ ಸೂಪರ್ ಆಗಿದ್ದು, ‘ಹ್ಯಾಪಿ ಬರ್ತ್ ಡೇ ಬಾಸ್’ ಎಂದು ಚಿತ್ರತಂಡ ಶುಭಾಶಯ ತಿಳಿಸಿದೆ.