ವ್ಯಾಲಂಟೈನ್ ಡೇ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದು ಹೀಗೆ….

0
236

ಬೆಂಗಳೂರು, ಫೆಬ್ರವರಿ 17, 2020 (www.justkannada.in): ಪ್ರೇಮಿಗಳು ಕೈ ಕೈ ಹಿಡಿದು ಓಡಾಡುವುದು, ರೊಮ್ಯಾನ್ಸ್ ಮಾಡುತ್ತಿರೋದು ನೋಡಿದರೆ ಕಲ್ಲು ಹೊಡೆಯಬೇಕು ಅನ್ನಿಸುತ್ತೆ ಎಂದಿದ್ದಾರೆ ನಟಿ ರಶ್ಮಿಕಾ.

ವ್ಯಾಲಂಟೈನ್ ಡೇ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದು, ನನಗೆ ವ್ಯಾಲೆಂಟೈನ್ಸ್ ಡೇ ಅಂದರೆ ಇಷ್ಟ ಇಲ್ಲ. ಪ್ರೇಮಿಗಳು ಕೈ ಕೈ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ಕೋಪ ಬರುತ್ತೆ ಎಂದು ಹೇಳಿದ್ದಾರೆ.

ಪ್ರೇಮಿಗಳು ರೊಮ್ಯಾನ್ಸ್ ಮಾಡುತ್ತಿರುವುದನ್ನು ನೋಡಿದರೆ ಕಲ್ಲಲ್ಲಿ ಹೊಡಿಯಬೇಕು ಎನ್ನಿಸುತ್ತದೆ. ಯಾಕೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂದು ರಶ್ಮಿಕಾ ಹೇಳಿದ್ದಾರೆ.

ಇನ್ನು ಸದ್ಯ ತೆಲುಗಿನ ‘ಭೀಷ್ಮ’ ಚಿತ್ರ ಫೆಬ್ರವರಿ 21ರಂದು ಬಿಡುಗಡೆಯಾಗುತ್ತಿದ್ದು, ಇಬ್ಬರು ಸಿನಿಮಾ ಪ್ರಚಾರದ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ಈ ಮೇಲಿನಂತೆ ಮಾತನಾಡಿದ್ದಾರೆ.