ಕೃಷಿ, ನೀರಾವರಿಗೆ ಹೆಚ್ಚು ಹೊತ್ತು: ನೆರೆ ಪೀಡಿತರಿಗೆ ಸ್ಪಂದಿಸಿ ಸರ್ಕಾರ ಕಾರ್ಯ ನಿರ್ವಹಣೆ- ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯಿವಾಲಾರಿಂದ  ಭಾಷಣ….

ಬೆಂಗಳೂರು,ಫೆ,17,2020(www.justkannada.in): ರಾಜ್ಯ ಸರ್ಕಾರ ಕೃಷಿ, ನೀರಾವರಿಗೆ ಹೆಚ್ಚು ಹೊತ್ತು ನೀಡಿದ್ದು  ನೆರೆ ಪೀಡಿತರಿಗೆ ಸ್ಪಂದಿಸಿ ಸರ್ಕಾರ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ರಾಜ್ಯಪಾಲ ವಜುಭಾಯಿವಾಲಾ ತಿಳಿಸಿದರು.

ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿದ್ದು, ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯಸರ್ಕಾರದ ಸಾಧನೆಗಳು, ಜಾರಿಯಾದ ಯೋಜನೆಗಳ ಕುರಿತು ಪ್ರಸ್ತಾಪಿಸಿದರು.

ಪ್ರವಾಹದಿಂದಾಗಿ ನೆರೆ ಪೀಡಿತ ಪ್ರದೇಶಗಳಿಗೆ ರಾಜ್ಯ ಸರ್ಕಾರ ಪರಿಹಾರ ಕ್ರಮಗಳು ಕುರಿತು ರಾಜ್ಯಪಾಲರು ಮಾತನಾಡಿದ್ದು, ನೆರೆ ಪರಿಹಾರಕ್ಕೆ ಸರ್ಕಾರ ಸೂಕ್ತರೀತಿಯಲ್ಲಿ ಸ್ಪಂದನೆ ನೀಡುತ್ತಿದೆ ಅಲ್ಲದೆ, ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಹಾಗೂ ಬೆಲೆ ಕಳೆದುಕೊಂಡ ರೈತರಿಗೆ ಸಮರೋಪಾದಿಯಲ್ಲಿ ಪರಿಹಾರ ನೀಡಿದೆ ಎಂದು  ಹೇಳಿದರು.

ಭಾಷಣದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಹೇಳಿದ್ದಿಷ್ಟು…

ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ಈ ಬಾರಿ ರಾಜ್ಯದಲ್ಲಿ ನೆರೆಯಿಂದ ಅಪಾರ ಹಾನಿಯಾಗಿತ್ತು.  ಕೇಂದ್ರದ ನೆರವಿನೊಂದಿಗೆ ಸಮರೋಪಾದೊಯಲ್ಲಿ ಸರ್ಕಾರ  ಕಾರ್ಯ ನಿರ್ವಹಣೆ ಮಾಡುತ್ತಿದೆ   ನೆರೆ ಪೀಡಿತರಿಗೆ ಸರ್ಕಾರ  ಸ್ಪಂದಿಸಿದೆ.

ಈ ಹಿಂದೆ ಮನೇಗ್ರಾ ಯೋಜನೆಯಡಿ 100 ದಿನಗಳಿಗೆ ನೀಡಲಾಗುತ್ತಿದ್ದ ಕೆಲಸವನ್ನ 150 ದಿನಗಳಿಗೆ ಏರಿಕೆ ಮಾಡಲಾಗಿದೆ. ನೆರೆಪೀಡಿತ 100 ತಾಲ್ಲೂಕುಗಳಿಗೆ ಜಲಸಂರಕ್ಷಣೆ ಯೋಜನೆ ಜಾರಿ ಮಾಡಲಾಗುತ್ತಿದೆ. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಗ್ರಾಮೀಣ ಭಾಗದ ರಸ್ತೆ ನಿರ್ಮಾಣಕ್ಕೆ ನೆರವು. 6.38 ಲಕ್ಷ ರೈತರ ಖಾತೆಗೆ 1126 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ ವರ್ಗಾವಣೆ ಮಾಡಲಾಗಿದೆ ಎಂದರು.

ಹಾಲು ಉತ್ಪಾದನೆಯಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದಿದೆ. 9 ಲಕ್ಷ ಹಾಲು ಪೂರೈಕೆದಾರರಿಗೆ ಸಹಾಯಧನ ನೀಡಲಾಗಿದೆ.  ಮೀನು ಉತ್ಪಾದನೆಯಲ್ಲಿ ರಾಜ್ಯ  9ನೇ ಸ್ಥಾನದಲ್ಲಿದೆ. ಮೀನುಗಾರರಿಗೆ ನೆರವಾಗಲು ಸರ್ಕಾರ ಕ್ರಮ ಕೈಗೊಂಡಿದೆ

ಉದ್ಯೋಗ ಸೃಷ್ಟಿಸಲು ಸರ್ಕಾರದಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಹೈ-ಕ ಪ್ರದೇಶ ಎಂಬ ಹೆಸರಿನ ಬದಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಎಂದು ಹೆಸರು ನೀಡಲಾಗಿದ್ದು ಕಲ್ಯಾಣ ಕರ್ನಾಟಕ ಭಿವೃದ್ದಿಗೆ 1500 ಕೋಟಿ. ಅನುದಾನ ನೀಡಲಾಗುತ್ತಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಭಾಷಣದಲ್ಲಿ ತಿಳಿಸಿದರು.

Key words:   Speech – Governor -Vajubhaiwala – joint session