Tuesday, September 22, 2026

BDA Apartments

ಅಭ್ಯಾಸ ಪುನಾರಂಭಿಸಿದ ಸೈನಾ ನೆಹ್ವಾಲ್ BDA JK_Adv BDA Adv
Home Front Page ಅಭ್ಯಾಸ ಪುನಾರಂಭಿಸಿದ ಸೈನಾ ನೆಹ್ವಾಲ್

ಅಭ್ಯಾಸ ಪುನಾರಂಭಿಸಿದ ಸೈನಾ ನೆಹ್ವಾಲ್

ಹೈದರಾಬಾದ್, ಆಗಸ್ಟ್ 10, 2020 (www.justkannada.in): ಸೈನಾ ನೆಹ್ವಾಲ್ ಹೈದರಾಬಾದ್‌ನಲ್ಲಿ ಪ್ರತ್ಯೇಕ ವ್ಯವಸ್ಥೆಯಲ್ಲಿ ತರಬೇತಿಯನ್ನು ಪುನರಾರಂಭಿಸಿದ್ದಾರೆ.

ಕೊರೊನಾ ಸೋಂಕಿನ ಭೀತಿ ನಡುವೆ ದೀರ್ಘ ಸಮಯ ವಿರಾಮ ಪಡೆದಿದ್ದ ಸೈನಾ ಇದೀಗ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ.

ಕೆಲವೇ ವಾರಗಳಲ್ಲಿ ಸಾಯ್ ಪುಲ್ಲೇಲ ಗೋಪಿಚಂದ್ ಅಕಾಡಮಿಯಲ್ಲಿರುವ ರಾಷ್ಟ್ರೀಯ ಶಿಬಿರಕ್ಕೆ ಸೇರ್ಪಡೆಯಾಗಲಿದ್ದಾರೆ.

ತೆಲಂಗಾಣ ಸರಕಾರ ಆಗಸ್ಟ್ 1ರಂದು ಅನುಮತಿ ನೀಡಿದ ಬಳಿಕ ಆಗಸ್ಟ್ 7ರಿಂದ ಸಾಯ್ ಪುಲ್ಲೇಲ ಗೋಪಿಚಂದ್ ಅಕಾಡಮಿಯಲ್ಲಿ ತರಬೇತಿ ಪುನರಾರಂಭಿಸಲು ಭಾರತ ಕ್ರೀಡಾ ಪ್ರಾಧಿಕಾರ(ಸಾಯ್) ದಿಂದ ಅವಕಾಶ ಪಡೆದ 8 ಮಂದಿ ಒಲಿಂಪಿಕ್ಸ್ ಆಕಾಂಕ್ಷಿಗಳ ಪೈಕಿ ಸೈನಾ ಕೂಡ ಒಬ್ಬರಾಗಿದ್ದಾರೆ.