Thursday, October 15, 2026

Dasara Wishes

Happy Dasara
Home Front Page ಆರ್ ಎಸ್ ಎಸ್ ನಿಷೇಧ ನೆಹರುರಿಂದಲೇ ಆಗಿಲ್ಲ. ಪ್ರಿಯಾಂಕ್ ಖರ್ಗೆಯಿಂದ ಸಾಧ್ಯವೇ..? ಬಿಜೆಪಿ ಶಾಸಕ ಟಾಂಗ್.

ಆರ್ ಎಸ್ ಎಸ್ ನಿಷೇಧ ನೆಹರುರಿಂದಲೇ ಆಗಿಲ್ಲ. ಪ್ರಿಯಾಂಕ್ ಖರ್ಗೆಯಿಂದ ಸಾಧ್ಯವೇ..? ಬಿಜೆಪಿ ಶಾಸಕ ಟಾಂಗ್.

ಶಿವಮೊಗ್ಗ,ಮೇ,26,2023(www.justkannada.in): ಭಜರಂಗದಳ,  ಆರ್ ಎಸ್ ಎಸ್ ಸಂಘಟನೆ ನಿಷೇಧ ಮಾಡಲು  ನೆಹರೂರಿಂದಲೇ ಆಗಲಿಲ್ಲ. ಇನ್ನು ಸಚಿವ ಪ್ರಿಯಾಂಕ್​​ ಖರ್ಗೆ ಅವರಿಂದ ಸಾಧ್ಯವೇ…? ಎಂದು ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಚನ್ನಬಸಪ್ಪ, ಮನೆ ಮನೆಯಲ್ಲಿ ಹಿಂದುತ್ವ ಮತ್ತು ಆರ್​​ಎಸ್​​ಎಸ್ ಬೆರೆತು ಹೋಗಿದೆ. ಪ್ರಿಯಾಂಕ್​ ಖರ್ಗೆ ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ  ಎಂದು ಕಿಡಿಕಾರಿದರು.ಆರ್ ಎಸ್ ಎಸ್ ನಿಷೇಧ ನೆಹರುರಿಂದಲೇ ಆಗಿಲ್ಲ. ಪ್ರಿಯಾಂಕ್ ಖರ್ಗೆಯಿಂದ ಸಾಧ್ಯವೇ...

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಶ್ವತ್  ನಾರಾಯಣ್, ಕಾರ್ಯಕರ್ತರ ಮೇಲೆ ಕೇಸ್​ ದಾಖಲಾಗಿದೆ ಎಂದು ಚನ್ನಬಸಪ್ಪ ವಾಗ್ದಾಳಿ ನಡೆಸಿದರು.

Key words: RSS – not banned -Nehru – Priyank Kharge-BJP -MLA