ಗ್ಯಾರಂಟಿಗಳ ಜಾರಿ ಮಾಡದಿದ್ರೆ ಹೋರಾಟ ಎಂದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಸಚಿವ ರಾಮಲಿಂಗರೆಡ್ಡಿ.

ಬೆಂಗಳೂರು,ಮೇ,26,2023(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡದಿದ್ದರೇ ಹೋರಾಟ ಮಾಡುತ್ತೇವೆ ಎಂದ ಸಂಸದ ಪ್ರತಾಪ್ ಸಿಂಹಗೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಪ್ರತಾಪ್ ಸಿಂಹ ಪ್ರತಿಭಟನೆ ಮಾಡುವುದು ಬೇಕಿಲ್ಲ. ನಾವು ಕೊಟ್ಟಿರುವ ಭರವಸೆಗಳನ್ನ ಈಡೇರಿಸುತ್ತೇವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 600 ಭರವಸೆ ನೀಡಿತ್ತು. 600 ಭರವಸೆಯಲ್ಲಿ ಕೇವಲ 60  ಭರವಸೆ ಈಡೇರಿಸಿತ್ತು. ಮೋದಿ ಅವರು ದೇಶದ ಎಲ್ಲರ ಖಾತೆಗೆ  15 ಲಕ್ಷ  ರೂ ಹಾಕುವುದಾಗಿ ಹೇಳಿದ್ದರು. ಆದರೆ ಎಲ್ಲರೂ ಖಾತೆ ಗೂ ಹಣ ಹಾಕಿದ್ರಾ..?  ಎಂದು ಟಾಂಗ್ ನೀಡಿದರು.

ಕರೆಂಟ್ ಬಿಲ್ ಕಟ್ಟದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ  ಕರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ,  ಎಲ್ಲಾ ಮಾಹಿತಿಗಳನ್ನ ಪಡೆಯುತ್ತಿದ್ದೇವೆ.  ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ ಎಂದರು.

ಬಹುತೇಕ  ಇಂದು ಸಂಪುಟ ವಿಸ್ತರಣೆಯಾಗುತ್ತದೆ.  ಶೇ.99ರಷ್ಟು ನಾಳೆ ಸಚಿವರು ಪ್ರಮಾಣ ವಚನ ಸ್ವೀಕರಿಸಬಹುದು ಎಂದು ರಾಮಲಿಂಗರೆಡ್ಡಿ ತಿಳಿಸಿದರು.

Key words: Minister- Ramalingareddy – MP- Prathap Simha – guarantees