ಇದು 80% ಪರ್ಸೆಂಟ್ ಸರ್ಕಾರ: ಉದ್ದೇಶಪೂರ್ವಕವಾಗಿ ನಮ್ಮ ಅವಧಿ ಕಾಮಗಾರಿಗಳಿಗೆ ತಡೆ- ನಳೀನ್ ಕುಮಾರ್ ಕಟೀಲ್.

 ಮಂಗಳೂರು,ಮೇ,26,2023(www.justkannada.in): ಕಾಂಗ್ರೆಸ್ ಸರ್ಕಾರ ಉದ್ಧೇಶಪೂರ್ವಕವಾಗಿ ನಮ್ಮ ಅವಧಿಯ ಕಾಮಗಾರಿಗಳಿಗೆ ತಡೆ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಇದು 80% ಪರ್ಸೆಂಟ್​ ಪಡೆಯುವ ಸರ್ಕಾರ. ನಮ್ಮ ವಿರುದ್ಧ ಕಾಂಗ್ರೆಸ್ ​​ನವರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆ ನಡೆಸಲಿ. ಹಿಂದಿನ ಎಲ್ಲ ಸರ್ಕಾರಗಳ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ನಾವು ಜಾರಿ ಮಾಡಿರುವ ಕಾಮಗಾರಿಗಳನ್ನ ಉದ್ಧೇಶಪೂರ್ವಕವಾಗಿ ಕಾಂಗ್ರೆಸ್ ಸರ್ಕಾರ ತಡೆಹಿಡಿಯುತ್ತಿದೆ ಎಂದು ಕಟೀಲ್  ಕಿಡಿಕಾರಿದರು.

Key words:  80% percent –congress Govt-bjp-president-Naleen Kumar Kateel.