ಸಂಪುಟ ವಿಸ್ತರಣೆ ವಿಳಂಬವಾಗುತ್ತಿಲ್ಲ- ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಮೇ,26,2023(www.justkannada.in):  ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿಲ್ಲ , ಬದಲಾಗಿ ಎಲ್ಲಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದರು.

ಬೆಂಗಳೂರು ನಗರದಲ್ಲಿ ಇಂದು ಮಾತನಾಡಿದ ಸಚಿವ ಡಾ ಜಿ.ಪರಮೇಶ್ವರ್,  ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಚರ್ಚಿಸುತ್ತಿದ್ದಾರೆ.  ಸಂಪುಟ ವಿಸ್ತರಣೆ ಕುರಿತು ಅನೇಕ ಊಹಾಪೋಹಗಳ ನಡೆಯುತ್ತಿದೆ. ಅಧಿಕೃತವಾಗಿ ಆಗುವವರೆಗೂ ಕಾಯಬೇಕು ಎಂದರು.

ಸಂಪುಟದಿಂದ ಹಿರಿಯರನ್ನು ಕೈ ಬಿಡುತ್ತಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಈ ಬಗ್ಗೆ ನಾಯಕರು ಹೇಳಿಕೆ ಕೊಟ್ಟಿಲ್ಲ. ಹೊರಗಡೆ ಊಹಾಪೋಹಗಳು ನಡೆಯುತ್ತಿದೆ. ಮಾಧ್ಯಮಗಳಲ್ಲಿ ನೋಡಿದ್ದೇವೆ ಅಷ್ಟೆ. ಆದರೆ ಪಕ್ಷದಿಂದ ಈ ಬಗ್ಗೆ ನಮಗೆ ಮಾಹಿತಿ ತಿಳಿದುಬಂದಿಲ್ಲ  ಎಂದು ಸ್ಪಷ್ಟನೆ ನೀಡಿದರು.

Key words: cabinet expansion – not- delayed-Minister- Dr. G. Parameshwar.