Saturday, September 19, 2026

BDA Apartments

ಆರ್.ಆರ್ ನಗರ, ಶಿರಾ ಉಪಚುನಾವಣೆ; ಕೊರೋನಾ ಸೋಂಕಿತರಿಂದ ಮತದಾನ BDA JK_Adv BDA Adv
Home Front Page ಆರ್.ಆರ್ ನಗರ, ಶಿರಾ ಉಪಚುನಾವಣೆ; ಕೊರೋನಾ ಸೋಂಕಿತರಿಂದ ಮತದಾನ..

ಆರ್.ಆರ್ ನಗರ, ಶಿರಾ ಉಪಚುನಾವಣೆ; ಕೊರೋನಾ ಸೋಂಕಿತರಿಂದ ಮತದಾನ..

ಬೆಂಗಳೂರು,ನವೆಂಬರ್,3,2020(www.justkannada.in):  ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ  ಆರ್.ಆರ್ ನಗರ, ಶಿರಾ ಉಪಚುನಾವಣೆ ಮತದಾನ ಇಂದು ನಡೆಯುತ್ತಿದ್ದು ಕೊರೋನಾ ಸೋಂಕಿತರು ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಸಂಜೆ 5 ಗಂಟೆಯಿಂದ 6 ಗಂಟೆವರೆಗೆ ಕೊರೋನಾ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಅಂತೆಯೇ ಶಿರಾದ  ಸರ್ಕಾರಿ ಉರ್ದು ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 177ರಲ್ಲಿ ಕೊರೋನಾ ಸೋಂಕಿತ ಮತದಾನ ಮಾಡಿದ್ದಾರೆ.RR  nagar-Shira -by-election-Voting - Corona -Infected

ಇನ್ನು ಆರ್ ಆರ್ ನಗರದಲ್ಲೂ ಲಗ್ಗೆರೆಯಲ್ಲಿ ಕೊರೋನಾ ಸೋಂಕಿತರು ಮತದಾನ ಮಾಡಿದ್ದಾರೆ. ಸಹ  ಕೊರೋನಾ ಸೋಂಕಿತರೊಬ್ಬರು ಪಿಪಿಇ ಕಿಟ್ ಧರಿಸಿ ಅಂಬ್ಯುಲೆನ್ಸ್ ನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಬಳಿಕ ಮತಗಟ್ಟೆಯನ್ನ ಸ್ಯಾನಿಟೈಸ್ ಮಾಡಲಾಗಿದೆ ಎನ್ನಲಾಗಿದೆ.  ಶಿರಾಕ್ಷೇತ್ರದಲ್ಲಿ  71 ಕೊರೋನಾ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು.

Key words: RR  nagar-Shira -by-election-Voting – Corona -Infected