ವಿರಾಜಪೇಟೆ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ…

ಕೊಡಗು,ನವೆಂಬರ್,3,2020(www.justkannada.in): ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣ ಪಂಚಾಯತ್  ನಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಬಿಜೆಪಿಯ ಟಿ.ಆರ್.  ಸುಶ್ಮಿತಾ ಪಂಚಾಯತ್ ಅಧ್ಯಕ್ಷೆಯಾಗಿ  ಆಯ್ಕೆಯಾಗಿದ್ದಾರೆ.jk-logo-justkannada-logo

ಬಿಜೆಪಿ ಅಭ್ಯರ್ಥಿ  ಟಿ.ಆರ್.  ಸುಶ್ಮಿತಾ  10 ಮತಗಳನ್ನ ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹರ್ಷವರ್ಧನ್ ಆಯ್ಕೆಯಾದರು.  ಉಪಾಧ್ಯಕ್ಷ ಸ್ಥಾನದಲ್ಲಿ ಕಾಂಗ್ರೆಸ್ ನ ಅಗಸ್ಟಿನ್ ಮತ್ತು ಹರ್ಷವರ್ಧನ್ ಅವರಿಗೆ 10-10 ಸಮಬಲದ ಮತಗಳು ಬಂದವು. ನಂತರ ಲಾಟರಿ ಮೂಲಕ ಆಯ್ಕೆಯಲ್ಲಿ ಹರ್ಷವರ್ಧನ್ ಗೆ ಅದೃಷ್ಟ ಒಲಿದಿದ್ದು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಿಜೆಪಿ 8 ಸದಸ್ಯರು,  ಸಂಸದರು, ಶಾಸಕರ ಮತಗಳು ಸೇರಿ 10 ಮತಗಳು ಬಿಜೆಪಿಗೆ ಲಭಿಸಿದೆ.  ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಮೈತ್ರಿ ಕೂಟಕ್ಕೆ ಸೋಲಾಯಿತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮೂಲಕ ಕಮಲ ಪಕ್ಷದ ದಿಗ್ವಿಜಯ ಸಾಧಿಸಿತು.

Key words: BJP –power-Virajpet -town panchayath- president-