Friday, November 13, 2026

Dasara Wishes

ಹೊಸ ಐಟಿ ನೀತಿ ಬಿಡುಗಡೆ: 2ನೇ ಹಂತದ ನಗರಗಳಿಗೆ ಐಟಿ ಕ್ಷೇತ್ರ ವಿಸ್ತರಣೆಗೆ ಉಪಕ್...
Happy Dasara
Home Front Page ಯೋಗ ಸಾಧನೆಯ ನಾಡು ಕರ್ನಾಟಕ: ನಟ ಡಾ.ರಾಜ್‌ ಕುಮಾರ್ ಸ್ಮರಿಸಿದ ಪ್ರಧಾನಿ ಮೋದಿ

ಯೋಗ ಸಾಧನೆಯ ನಾಡು ಕರ್ನಾಟಕ: ನಟ ಡಾ.ರಾಜ್‌ ಕುಮಾರ್ ಸ್ಮರಿಸಿದ ಪ್ರಧಾನಿ ಮೋದಿ

ಯೋಗ ಸಾಧನೆಯ ನಾಡು ಕರ್ನಾಟಕ: ನಟ ಡಾ.ರಾಜ್‌ ಕುಮಾರ್ ಸ್ಮರಿಸಿದ ಪ್ರಧಾನಿ ಮೋದಿ

ಬೆಂಗಳೂರು,ನವೆಂಬರ್,13,2026 (www.justkannada.in): ಕರ್ನಾಟಕವು ಹಲವು ದಶಕಗಳಿಂದ ಯೋಗ ಕೇಂದ್ರವಾಗಿದೆ. ಯೋಗ ಸಾಧನೆಯ ನಾಡು ಕರ್ನಾಟಕ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಬೆಂಗಳೂರಿನ ಜಿಗಣಿ ಬಳಿಯಿರುವ ‘ಪ್ರಶಾಂತಿ ಕುಟೀರ’ದ ಸುವರ್ಣ ಮಹೋತ್ಸವ ಹಾಗೂ ಎಚ್.ವಿ. ಶೇಷಾದ್ರಿ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರು ಯೋಗಾಭ್ಯಾಸ ಮಾಡುತ್ತಿದ್ದ ಬಗ್ಗೆ ಮತ್ತು ಭಾರತೀಯ ಯೋಗ ಪರಂಪರೆಗೆ ಅವರ ಒಡನಾಟವಿದ್ದ ಬಗ್ಗೆ ಉಲ್ಲೇಖಿಸಿದರು. ಯೋಗದ ಮಹತ್ವ ವಿವರಿಸುವ ವೇಳೆ ವರನಟ ಡಾ. ರಾಜ್‌ ಕುಮಾರ್ ಅವರ ಯೋಗ ಸಾಧನೆ ಮತ್ತು ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಿದರು.ಯೋಗ ಸಾಧನೆಯ ನಾಡು ಕರ್ನಾಟಕ: ನಟ ಡಾ.ರಾಜ್‌ ಕುಮಾರ್ ಸ್ಮರಿಸಿದ ಪ್ರಧಾನಿ ಮೋದಿ

ಇದೇ ವೇಳೆ ಹಿರಿಯ ಚಿಂತಕ ಎಚ್.ವಿ. ಶೇಷಾದ್ರಿ ಅವರೊಂದಿಗೆ ಇದ್ದ ಒಡನಾಟವನ್ನು ಸ್ಮರಿಸಿದ ಪ್ರಧಾನಿ ಮೋದಿ, “ಎಚ್.ವಿ. ಶೇಷಾದ್ರಿ ಅವರ ಸ್ನೇಹ ಮತ್ತು ಅಮೂಲ್ಯ ಮಾರ್ಗದರ್ಶನ ನನಗೆ ಸದಾ ಸಿಕ್ಕಿದೆ. ವೇದಿಕೆಯಲ್ಲಿ ಉಪಸ್ಥಿತರಿದ್ದ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಶೇಷಾದ್ರಿ ಅವರ ಸೇವೆ ಮತ್ತು ಸಾಧನೆಗಳ ಕುರಿತು ಅತ್ಯಂತ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ. ಶೇಷಾದ್ರಿಯವರು ಕೇವಲ ಸಂಘಟನಾ ಕ್ಷೇತ್ರಕ್ಕಷ್ಟೇ ಸೀಮಿತರಾಗದೆ, ಸಮಾಜ ಸೇವೆಯಲ್ಲೂ ಅತ್ಯಂತ ನಿಷ್ಠೆಯಿಂದ ತೊಡಗಿಸಿಕೊಂಡು ದೇಶಕ್ಕೆ ಮಾದರಿಯಾಗಿದ್ದರು ಎಂದು ನುಡಿದರು.Karnataka jk02_new jk02 new

Karnataka, Yoga,  PM Modi, remembered, actor, Dr. Rajkumar

English Summary
Title

PM Modi Remembers Kannada Icon Dr. Rajkumar for His Dedication to Yoga at Bengaluru S-VYASA Event

Short Description
During the golden jubilee celebrations of S-VYASA Prashanti Kutiram in Bengaluru on November 13, 2026, Prime Minister Narendra Modi paid tribute to legendary Kannada actor Dr. Rajkumar. Highlighting Karnataka's rich, centuries-old yoga heritage, PM Modi praised the late cinema icon for actively promoting and serving the field of yoga alongside his monumental contributions to Indian art and culture. Addressing the gathering near Jigani, the Prime Minister emphasized how Karnataka has nurtured countless yoga scholars who popularized the ancient discipline globally. PM Modi also laid the foundation stone for the university's Golden Jubilee Administrative Block during the event.
Keywords
Karnataka, Yoga, PM Modi, remembered, actor, Dr. Rajkumar