ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ: ಪರಿಸರವಾದಿಗಳಿಂದ ವಿರೋಧ.

ಮೈಸೂರು,ಮಾರ್ಚ್,19,2024(www.justkannada.in): ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಡೆಗೆ ಪರಿಸರವಾದಿಗಳ ವಿರೋಧ ವ್ಯಕ್ತಪಡಿಸಿದ್ದಾರೆ.

ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯು ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ  ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದೆ.

ರೋಪ್ ವೇ ನಿರ್ಮಾಣದಿಂದ ಚಾಮುಂಡಿ ಬೆಟ್ಟ ಮೋಜು ಮಸ್ತಿಯ ತಾಣವಾಗುತ್ತದೆ. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಅವಶ್ಯಕತೆ ಇಲ್ಲ. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಿ ಎಂದು ಯಾರು ಕೇಳಿರಲಿಲ್ಲ. ಚಾಮುಂಡಿ ಬೆಟ್ಟದಲ್ಲಿ ದೈವತ್ವ, ಪ್ರಾಣಿ ಪಕ್ಷಿಗಳು ಎಲ್ಲವೂ ಇವೆ. ಇತ್ತೀಚಿನ ದಿನಗಳಲ್ಲಿ ಹಣ ಮಾಡಲಿಕ್ಕೆ ಈ ರೀತಿಯ ಯೋಜನೆಗಳನ್ನ ಸರ್ಕಾರಗಳು ಮಾಡುತ್ತಿವೆ. ಮರಗಳನ್ನ ಕಡಿದು, ಅಭಿವೃದ್ಧಿ ಮಾಡುವುದು ಏಕೆ? ಕೆರೆ ಕಟ್ಟೆಗಳನ್ನ ಮುಚ್ಚಿ ಅಭಿವೃದ್ಧಿ ಮಾಡುವುದು ಏಕೆ? ಪರಿಸರ ಉಳಿದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ. ಹೀಗಾಗಿ ಚಾಮುಂಡಿ ಬೆಟ್ಟ ಪಾರಂಪರಿಕ ತಾಣವಾಗಿಯೇ ಉಳಿಯಬೇಕು ಎಂದು  ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಸದಸ್ಯರು ಮನವಿ ಮಾಡಿದರು.

Key words: rope way – Chamundi hill – Mysore- opposition – environmentalists.