ಸಿಎಂ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ ಸಂಸದ ಪ್ರತಾಪ್ ಸಿಂಹ.

ಮೈಸೂರು,ಮಾರ್ಚ್,19,2024(www.justkannada.in):  ಯದುವೀರ್ ಯಾವ ರಾಜ ರೀ ಎಂಬ  ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ಜಾರಿಯಾದ ದಿನದಿಂದ ರಾಜ ಮಹಾರಾಜ ಎಂಬುದಿಲ್ಲ. ಇದರಲ್ಲಿ ಹುಳುಕು ಹುಡುಕುವುದು ತಪ್ಪು. ಯದುವೀರ್ ಬಿಜೆಪಿ ಅಭ್ಯರ್ಥಿ,  ನಾನು ಕೂಡು ಹೇಳಿಕೆ ಕೊಡುವಾಗ ಅವರು ಪ್ರಜಾ ಪ್ರತಿನಿಧಿಯಾಗಿರಬೇಕು ಅಂತಾ ಅವತ್ತೇ ನಾನು ಹೇಳಿದ್ದೆ. ಯದುವೀರ್ ಪ್ರಜಾ ಪ್ರತಿನಿಧಿಯಾಗಲು ಬಂದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸಿಎಂ ಹೇಳಿಕೆ ಹುಳುಕು ಅನ್ನಿಸುತ್ತಿಲ್ಲ. ಸಿಎಂ ಹೇಳಿರುವುದರಲ್ಲಿ ತಪ್ಪಿಲ್ಲ ಎಂದರು.

ದೇಶದಲ್ಲಿ ರಾಜಾಡಳಿತ ಇಲ್ಲ. ನವರಾತ್ರಿ ಸಂಧರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುವಾಗ ವಿಧಿ ವಿಧಾನಗಳಿಗೆ ಸೀಮಿತವಾಗಿರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನ ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ನನಗು ಅವರಿಗೂ ಬಹಳಷ್ಟು ವಿರೋಧಗಳು ಇದೆ. ಮೈಸೂರಿನ ಜನ ಯದುವೀರ್ ಅವರನ್ನ ಮಹಾರಾಜ ಅಂಥ ಕರೆಯುತ್ತೀರಾ? ಅಥವಾ ಬಿಜೆಪಿ ಅಭ್ಯರ್ಥಿ ಅಂಥ ಕರೆಯುತ್ತೀರಾ? ಮಹಾರಾಜರು ಅರಮನೆಗೆ ಸೀಮಿತವಾಗಿರದೆ ಜನಪ್ರತಿನಿಧಿಯಾಗಲು ಬಂದಿದ್ದಾರೆ. ಹೀಗಾಗಿ ಸಿಎಂ ಬಿಜೆಪಿ ಅಭ್ಯರ್ಥಿ ಎಂದು ಕರೆದಿರುವುದರಲ್ಲಿ ತಪ್ಪಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಬೇರೆಯವರು ಕಮಿಷನ್ ತೆಗೆದುಕೊಂಡಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಗಿಂತ ನಾವೇ ಫಾಸ್ಟ್ ಇದ್ದೇವೆ. ನನ್ನ ಕಾಲಾವಧಿಯಲ್ಲಿ ಮಾಡಿದ ಕೆಲಸಗಳ ರಿಪೋರ್ಟ್ ಕಾರ್ಡನ್ನ‌ ಸಿದ್ದಗೊಳಿಸಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕಾಪಿ ಪ್ರಿಂಟ್ ಮಾಡಿ  ಹಂಚಿದ ದೇಶದ ಮೊದಲ ಸಂಸದ ನಾನೇ ಎಂದ ಸಂಸದ ಪ್ರತಾಪ್ ಸಿಂಹ , ಯದುವೀರ್ ಸಮ್ಮುಖದಲ್ಲಿ ತಾನು ಮಾಡಿದ ಕೆಲಸ ಕಾರ್ಯ ಸಾಧನೆಗಳನ್ನ ಹೇಳಿದರು.

ಗುತ್ತಿಗೆದಾರರಲ್ಲಿ ಯಾರ ಬಳಿ ಎಂದೂ  ಕಮಿಷನ್ ಪಡೆದಿಲ್ಲ ಅಂತ ನಾನು ಎದೆ ತಟ್ಟಿಕೊಂಡು ಹೇಳುತ್ತೇನೆ. ಬೇರೆಯವರು ತೆಗೆದುಕೊಂಡಿದ್ದಾರೆ.  ನನ್ನ ಸಾಲಿಗೆ ಈಗ ಶ್ರೀವತ್ಸಣ್ಣ ಸೇರಿದ್ದಾರೆ ಅವರು ತೆಗೆದುಕೊಳ್ಳಲ್ಲ. ಬೇರೆಯವರೆಲ್ಲಾ ತೆಗೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಕಮಿಷನ್ ತೆಗೆದುಕೊಳ್ಳೋದು ನಿಜ ಎಂದು ಪ್ರತಾಪ್ ಸಿಂಹ ಒಪ್ಪಿಕೊಂಡರು.

ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಿದೆ, ಟಿಪ್ಪು ಅವರ ಹೆಸರಿನಲ್ಲಿದ ಟ್ರೈನ್ ಹೆಸರನ್ನು ಬದಲಿಸಿ ನಾಲ್ವಡಿ ಒಡೆಯರ ಹೆಸರನ್ನು ಇಡಲು ಹೋರಾಟ ಮಾಡಿದೆ.  ಮಹಿಷಾ ದಸರಾ ನಿಲ್ಲಿಸಲು ಹೋರಾಡಿದೆ.  ಸಂಘರ್ಷಕ್ಕೆ ನಿಂತೆ ಎಂದು ತಾವು ಮಾಡಿದ ಕೆಲಸದ ಬಗ್ಗೆ ಹೇಳಿಕೊಂಡರು.

ಯಧುವೀರ್ ಮುಂದೆ ನಿಂತು ಟಿಕೇಟ್ ಕೈತಪ್ಪಿದಕ್ಕೆ ಪರೋಕ್ಷವಾಗಿ ಆಕ್ರೋಶ ತೋಡಿಕೊಂಡ ಪ್ರತಾಪ್ ಸಿಂಹ, ಇಂದು ಪಕ್ಷ ತೀರ್ಮಾನ ಮಾಡಿದೆ ಯದುವೀರ್ ಗಿಂತ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿತಲ್ಲ ಎಂಬ ನೋವು ನಿಮಗೆ ಇರಬಹುದು. ಇರಲಿ ನನಗೆ ಪಕ್ಷ ಹತ್ತು ವರ್ಷ ಅವಕಾಶ ಮಾಡಿಕೊಟ್ಟಿದೆ. ಟಿಕೆಟ್ ಸಿಗಲಿಲ್ಲ ಎಂದು ನಾನು ತಲೆ ಕೆಡಿಸಿಕೊಂಡು ಹೋಗಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಯದುವೀರ್ ಅವರನ್ನು ಗೆಲ್ಲಿಸಿಕೊಂಡು ಬರಲು ಎಲ್ಲರು ಒಗ್ಗೂಡಿ ಕೆಲಸ ಮಾಡೋಣ ಎಂದು ಜನರ ಬಳಿ ಪ್ರತಾಪ್ ಸಿಂಹ ಭಾವೋದ್ವೇಗದಿಂದ  ಮತಯಾಚನೆ ಮಾಡಿದರು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ಲಕ್ಷ್ಣಣ್ ವಿರುದ್ಧ ವ್ಯಂಗ್ಯವಾಡಿದ ಸಂಸದ ಪ್ರತಾಪ ಸಿಂಹ,  ಕಾಂಗ್ರೆಸ್ ನಲ್ಲಿ ಈಗ ಕೇಳಿ ಬರುತ್ತಿರುವ ಹೆಸರು ಫೈನಲ್ ಆದ್ರೆ ಪ್ರಚಾರಕ್ಕೆ ಹೋಗುವುದೇ ಬೇಡ. ಯದುವೀರ್ ಒಳ್ಳೆ ಅಂತರದಿಂದ ಗೆಲ್ಲುತ್ತಾರೆ. ನಾನು ಚುನಾವಣೆಗೆ ನಿಂತಿದ್ದರೆ ಎರೆಡರಿಂದ ಮೂರು ಲಕ್ಷ ಮತಗಳಿಂದ ಗೆಲ್ಲುತ್ತಿದ್ದೆ. ನನ್ನ ಮುಂದಿನ ಗುರಿ ಯದುವೀರ್ ಗೆಲ್ಲಿಸುವುದು ಎಂದರು.

Key words: BJP -MP Pratap Simha -defended -CM Siddaramaiah- statement-yaduveer