Tuesday, September 22, 2026

BDA Apartments

ಕೇರಳಾ ಕ್ರಿಕೆಟ್ ತಂಡಕ್ಕೆ ರಾಬಿನ್ ಉತ್ತಪ್ಪ ಕ್ಯಾಪ್ಟನ್ BDA JK_Adv BDA Adv
Home Front Page ಕೇರಳಾ ಕ್ರಿಕೆಟ್ ತಂಡಕ್ಕೆ ರಾಬಿನ್ ಉತ್ತಪ್ಪ ಕ್ಯಾಪ್ಟನ್

ಕೇರಳಾ ಕ್ರಿಕೆಟ್ ತಂಡಕ್ಕೆ ರಾಬಿನ್ ಉತ್ತಪ್ಪ ಕ್ಯಾಪ್ಟನ್

ಬೆಂಗಳೂರು, ಸೆಪ್ಟೆಂಬರ್ 29, 2019 (www.justkannada.in): ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಪ್ರಸಕ್ತ ಋತುವಿನಿಂದ ಕೇರಳ ತಂಡದ ಪರ ಆಡುತ್ತಿದ್ದು, ಇದೀಗ ಕೇರಳ ತಂಡದ ನಾಯಕ ಸ್ಥಾನ ಅಲಂಕರಿಸಿದ್ದಾರೆ.

ಕೆಲವು ಸಮಯದಿಂದ ಉತ್ತಪ್ಪ ಅವರೇ ಕೇರಳ ಸೀಮಿತ ಓವರ್‌ಗಳ ತಂಡದ ನಾಯಕರಾಗಬಹುದು ಎಂಬ ಸುದ್ದಿ ಹಬ್ಬಿತ್ತು. ಈಗ ಎಲ್ಲ ಗೊಂದಲಗಳಿಗೆ ತೆರೆಬಿದ್ದಿದೆ.

ವಿಜಯ್‌ ಹಜಾರೆ ಏಕದಿನ ಕೂಟದಲ್ಲಿ, ಉತ್ತಪ್ಪ ಕೇರಳ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೇರಳ ಕ್ರಿಕೆಟ್‌ ಸಂಸ್ಥೆ ಘೋಷಿಸಿದೆ. ಅನಂತರದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಲ್ಲೂ ಉತ್ತಪ್ಪ ಅವರೇ ನಾಯಕರಾಗಿ ಮುಂದುವರಿಯಲಿದ್ದಾರೆ.