ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ : ಪೊಲೀಸ್ ಬಲೆಗೆ ಸಿಕ್ಕಿಬಿದ್ದ ಕಳ್ಳರು….

ಮೈಸೂರು,ಫೆಬ್ರವರಿ,2,2021(www.justkannada.in): ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ದರೋಡೆಕೋರರನ್ನ ಮೈಸೂರಿನ  ವಿದ್ಯಾರಣ್ಯಪುರಂ  ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.jk

ಶಿವಕುಮಾರ್ ಹಾಗೂ ಹರೀಶ್ ಯಾದವ್ ಬಂಧಿತ ಆರೋಪಿಗಳು. ಬಂಧಿತರಿಂದ 4 ಲಕ್ಷ ಮೌಲ್ಯದ ಚಿನ್ನಾಭರಣ 2 ದ್ವಿಚಕ್ರ ವಾಹನ ಹಾಗೂ ಚಾಕನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರು ನೀರು ಕೇಳುವ ನೆಪದಲ್ಲಿ ಮೈಸೂರು ಹೊರವಲಯದ ಮಹದೇವಪುರದ ನಾಗರತ್ನ ಎಂಬುವವರಿಗೆ ಚಾಕು ತೋರಿಸಿ ದರೋಡೆ ಮಾಡಿದ್ದರು.Robbery - house -Robbers –arrest- mysore- police

ಒಟ್ಟು ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಇದೀಗ ವಿದ್ಯಾರಣ್ಯಪುರಂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಚಿನ್ನಾಭರಣಗಳನ್ನು ಮಾರುವಾಗ ಚಾಲಾಕಿ ಕಳ್ಳರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎಂದು  ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದ್ದಾರೆ.

Key words: Robbery – house -Robbers –arrest- mysore- police