“ಬಿಡಿಎ ಅಕ್ರಮ ; ಸುಧಾರಣೆ ಕ್ರಮದ ಬಗ್ಗೆ ಸಿಎಂ ಬಿ.ಎಸ್.ವೈ ಭರವಸೆ”

ಬೆಂಗಳೂರು,ಜನವರಿ,02,2021(www.justkannada.in) : ಸರ್ಕಾರವು ಮೂರು ತಿಂಗಳಲ್ಲಿ ಬಿಡಿಎ ಅಕ್ರಮಗಳಿಗೆ ಬ್ರೇಕ್ ಹಾಕಿದ್ದು, ಬಿಡಿಎ ಸುಧಾರಣೆ ಮಾಡಿಯೇ ತೀರುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸವ್ಯಕ್ತಪಡಿಸಿದ್ದಾರೆ.

jk

ಬಿಡಿಎನಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತೇನೆ. ಸೈಟ್ ಗಳಿಗೆ ದಾಖಲೆಗಳೇ ಇಲ್ಲದ ಪರಿಸ್ಥಿತಿ ಇದೆ. ಅಧಿಕಾರಿಗಳ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ. ನೀವೇ ನೋಡ್ತಾ ಇರಿ ಬದಲಾವಣೆ ಮಾಡುವೆ ಎಂದು ತಿಳಿಸಿದ್ದಾರೆ.

 

ಇದಕ್ಕೂ ಮೊದಲು, ಸದನದಲ್ಲಿ ಬಿಡಿಎ ಸೈಟ್ ಕುರಿತು ಶಾಸಕ ಅರಗ ಜ್ಞಾನೇಂದ್ರ ನನಗೆ ಕೊಟ್ಟ ಸೈಟ್ ನಲ್ಲಿ ಮನೆ ಕಟ್ಟಲು ಆಗ್ತಿಲ್ಲ. ನನ್ನ ಸೈಟ್ʼಗೆ ನಕಲಿ ದಾಖಲೆ ಸೃಷ್ಠಿಸಿದ್ದು, ನಕಲಿ ದಾಖಲೆ ಕೊಟ್ಟು ವ್ಯಾಜ್ಯ ಮಾಡಿದ್ದಾರೆ. ಹೀಗಾಗಿ, ನನಗೆ ಇನ್ನೂ ಸೈಟ್ ಸಿಕ್ಕಿಲ್ಲ, ಬಿಡಿಎನಲ್ಲಿ ಇಂತಹ ಅಕ್ರಮಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.BDA,illegal,Reform,action,CM B.S.Y.Hope 

ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್, ಸುಮ್ಮನೆ ಯಾಕೆ ನೀವು ಆರೋಪ ಮಾಡ್ತೀರಿ. ನಿಮ್ಮ ಭಾಷಣ ಕೇವಲ ಭಾಷಣ ಆಗಬಾರದುನಿಮ್ಮ ಮಾತು ಕೇಳಿ ಸಿಎಂ ಕ್ರಮ ಕೈಗೊಳ್ಳಬೇಕಲ್ಲವೇ ಎಂದು ಹೇಳಿದರು. ಇದಕ್ಕೆ ಸಿಎಂ ಬಿ.ಎಸ್.ವೈ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

key words : BDA-illegal-Reform-action-CM B.S.Y.Hope