Wednesday, August 12, 2026

BDA Apartments

Home Crime ಕಂದಾಯ ಹಣ ಬಾಕಿ ಹಿನ್ನಲೆ : ಮೈಸೂರು ಪಾಲಿಕೆ ಅಧಿಕಾರಿಗಳಿಂದ ಹೋಟೆಲ್ ಕಾಂಪ್ಲೆಕ್ಸ್ ಜಪ್ತಿ

ಕಂದಾಯ ಹಣ ಬಾಕಿ ಹಿನ್ನಲೆ : ಮೈಸೂರು ಪಾಲಿಕೆ ಅಧಿಕಾರಿಗಳಿಂದ ಹೋಟೆಲ್ ಕಾಂಪ್ಲೆಕ್ಸ್ ಜಪ್ತಿ

ಮೈಸೂರು,ಡಿ,23,2019(www.justkannada.in): ಕಂದಾಯ ಹಣ ಬಾಕಿ ಉಳಿಸಿಕೊಂಡ  ಹಿನ್ನಲೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ಜಪ್ತಿ ಮಾಡಲಾಯಿತು.

ಕಾಂಪ್ಲೆಕ್ಸ್ ಮಾಲೀಕರು 88,99,777  ರೂ  ಕಂದಾಯ ಬಾಕಿ ಉಳಿಸಿಕೊಂಡಿದ್ದರು. ಕಳೆದ ಮೂರು ವರ್ಷಗಳಿಂದ ಉಳಿಕೆ ಕಂದಾಯ ಹಣ ಪಾವತಿಮಾಡಿರಲಿಲ್ಲ. ಪಾಲಿಕೆ ಅಧಿಕಾರಿಗಳು ಸಾಕಷ್ಟು ಸಮಯ ನೀಡಿದ್ದರು ಬಾಕಿಹಣ ಪಾವತಿಸದೇ ನಿರ್ಲಕ್ಷ್ಯ ತೋರಿದ್ದರು. ಹೀಗಾಗಿ ಇಂದು ಕಂದಾಯ ಉಪ ಆಯುಕ್ತರ ನೇತೃತ್ವದಲ್ಲಿ ಹೋಟೆಲ್ ಜಪ್ತಿ ಮಾಡಲಾಯಿತು.

ಈ ವೇಳೆ ತಕ್ಷಣ ಎಚ್ಚೆತ್ತ ಕಾಂಪ್ಲೆಕ್ಸ್ ಮಾಲೀಕರು ಚೆಕ್ ಮೂಲಕ ಬಾಕಿ ಕಂದಾಯ ಹಣ ಪಾವತಿ ಮಾಡಿದ್ದು, ಕಂದಾಯ ವಸೂಲಿ ಮಾಡಿ ಅಧಿಕಾರಿಗಳು ಜಪ್ತಿ ಕೈಬಿಟ್ಟರು.

Key words:  Revenue -Money –Dues-Hotel Complex- Mysore city corporation