ಅವರ ಅಡ್ರೆಸ್ ಎಲ್ಲಿದೆ ಅಂತಾ ನಾವು ಹುಡುಕಬೇಕಾಗುತ್ತೆ- ಮಾಜಿ ಸಿಎಂ ಹೆಚ್.ಡಿಕೆಗೆ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು…

ಬೆಂಗಳೂರು,ಡಿ,24,2019(www.justkannada.in):  ಬಿಜೆಪಿಯವರಿಗೆ ಅಡ್ರೆಸ್ ಎಲ್ಲಿದೆ ಅಂತಾ ಜನರೇ ತೋರಿಸ್ತಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿರುವ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ, ಅವರ ಅಡ್ರೆಸ್ ಎಲ್ಲಿದೆ ಅಂತಾ ನಾವು ಹುಡುಕಬೇಕಾಗುತ್ತೆ ಎಂದು ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಹೆಚ್.ಡಿ ಕುಮಾರಸ್ವಾಮಿಗೆ ತನ್ನ ಮಗ ಅಪ್ಪನನ್ನೇ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಇನ್ನು ಆದ್ರೂ ಅವರಿಗೆ ಬುದ್ದಿ ಬಂದಿಲ್ಲವೆಂದ್ರೆ ನಾನೇನು ಮಾಡಲಿ. ಅವರ ಅಡ್ರೆಸ್ ಎಲ್ಲಿ ಅಂತಾ ನಾವು ಹುಡುಕಬೇಕಾಗುತ್ತೆ ಎಂದು ಲೇವಡಿ ಮಾಡಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ರಾಜೀನಾಮೆ ಕೊಟ್ಟು ಬಂದವರ ಋಣ ತೀರಿಸಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಶೀಘ್ರದಲ್ಲೇ ಕೇಂದ್ರ ನಾಯಕರ ಜತೆ ಸಿಎಂ ಬಿಎಸ್ ವೈ ಚರ್ಚೆ ಮಾಡುತ್ತಾರೆ. ಅವರನ್ನೆಲ್ಲಾ ಮಂತ್ರಿ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

Key words:  find – address- Minister -KS Eshwarappa- tong-Former CM HD Kumaraswamy