Thursday, September 17, 2026

BDA Apartments

Home Front Page ರಸ್ತೆ ದುರಸ್ತಿಗೆ ಒತ್ತಾಯಿಸಿ ಬೀದಿಗಿಳಿದ ಮೈಸೂರಿನ ಮಂಚೇಗೌಡನ ಕೊಪ್ಪಲು ನಿವಾಸಿಗಳು

ರಸ್ತೆ ದುರಸ್ತಿಗೆ ಒತ್ತಾಯಿಸಿ ಬೀದಿಗಿಳಿದ ಮೈಸೂರಿನ ಮಂಚೇಗೌಡನ ಕೊಪ್ಪಲು ನಿವಾಸಿಗಳು

ಮೈಸೂರು, ಫೆಬ್ರವರಿ 08, 2020 (www.justkannada.in): ಹದಗೆಟ್ಟ ಮಂಚೇಗೌಡನ ಕೊಪ್ಪಲು ಮುಖ್ಯರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಬಡಾವಣೆ ನಿವಾಸಗಳಿಂದ ಪ್ರತಿಭಟನೆ ನಡೆಯಿತು.

ರಸ್ತೆ ತಡೆದು ಅಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು. ರಸ್ತೆ ಅಭಿವೃದ್ಧಿ ವಿಳಂಬಕ್ಕೆ ಅಧಿಕಾರಿಗಳು ,ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷದಿಂದ ಕಾಮಗಾರಿ ಪೂರ್ಣ ಆಗಿಲ್ಲ. ರಸ್ತೆಯ ದೂಳು ಹಾಗೂ ಗುಂಡಿಯಿಂದ ಸಾರ್ವಜನಿಕರು ಅಸ್ಪತ್ರೆ ಸೇರುವಂತೆ ಆಗಿದೆ. ಯಾವುದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದ್ರು ಪ್ರಯೋಜನ ಎಂದು ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದರು.