Thursday, August 13, 2026

BDA Apartments

Home Front Page ಬಿಎಸ್ವೈ ಸಂಕಷ್ಟ ಬಂದ್ರೆ ಬೆಂಬಲಕ್ಕೆ ನಾನ್ ರೆಡಿ ಎಂದ ಕೊಳ್ಳೇಗಾಲ ಶಾಸಕ ಎನ್.ಮಹೇಶ್

ಬಿಎಸ್ವೈ ಸಂಕಷ್ಟ ಬಂದ್ರೆ ಬೆಂಬಲಕ್ಕೆ ನಾನ್ ರೆಡಿ ಎಂದ ಕೊಳ್ಳೇಗಾಲ ಶಾಸಕ ಎನ್.ಮಹೇಶ್

ಬೆಂಗಳೂರು, ಫೆಬ್ರವರಿ 08, 2020 (www.justkannada.in): ಕೊಳ್ಳೆಗಾಲ ಶಾಸಕ ಎನ್.ಮಹೇಶ್ ತಮ್ಮ ಬದಲಾದ ತಮ್ಮ ಬೆಂಬಲದ ನಿರ್ಣಯವನ್ನು ಬಹಿರಂಗವಾಗಿ ಘೋಷಿಸಿದ್ದಾರೆ.

ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಹಾಗೂ ಬೆಂಬಲ ಅವಶ್ಯಕವಿದ್ದ ಸಂದರ್ಭದಲ್ಲಿ ಸರ್ಕಾರಕ್ಕೆ ಕೈಕೊಟ್ಟಿದ್ದ ಎನ್.ಮಹೇಶ್ ಈಗ ತಮ್ಮ ಬೆಂಬಲವನ್ನು ಬಹಿರಂಗವಾಗಿ ಘೊಷಿಸಿದ್ದಾರೆ.

ಬಿಎಸ್‌ಪಿ ಪಕ್ಷದಿಂದ ಉಚ್ಛಾಟಿತವಾಗಿರುವ ಮಹೇಶ್, ‘ನಾನು ಈಗ ಸ್ವತಂತ್ರ್ಯನಾಗಿದ್ದು, ನನ್ನ ಬೆಂಬಲ ಬಿಜೆಪಿ ಸರ್ಕಾರಕ್ಕೆ’ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರು ತಮ್ಮ ಸರ್ಕಾರಕ್ಕೆ ಬೆಂಬಲ ಕೇಳಿದ್ದರು. ಈಗ ನನ್ನ ನಿರ್ಧಾರ ಸ್ಪಷ್ಟವಿದೆ, ನನ್ನ ಬೆಂಬಲ ಬಿಜೆಪಿ ಸರ್ಕಾರಕ್ಕೆ’ ಎಂದು ಘೋಷಿಸಿದ್ದಾರೆ.