ಮಾಂಸಾಹಾರ ಸೇವಿಸಿ ವಸತಿ ಶಾಲಾ ಮಕ್ಕಳು ಅಸ್ವಸ್ಥ ಪ್ರಕರಣ: ಲೋಕಾಯುಕ್ತ ಅಧಿಕಾರಿಗಳು ಭೇಟಿ, ಪರಿಶೀಲನೆ.

ಗುಂಡ್ಲುಪೇಟೆ,ಜುಲೈ,18,2023(www.justkannada.in): ಮಾಂಸಾಹಾರ ಸೇವಿಸಿ ವಸತಿ ಶಾಲಾ ಮಕ್ಕಳು ಅಸ್ವಸ್ಥಗೊಂಡ  ಪ್ರಕರಣಕ್ಕೆ ಸಂಬಂಧಿಸಿದಂತೆ ಮೊರಾರ್ಜಿ ವಸತಿ ಶಾಲೆಗೆ  ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊನ್ನೆ ಗುಂಡ್ಲುಪೇಟೆ ತಾಲ್ಲೂಕಿನ ಯಡವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಮಾಂಸಾಹಾರ ಸೇವಿಸಿ ವಸತಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದರು. ತಕ್ಷಣ ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಲೋಕಾಯ್ತುಕ ಡಿ.ವೈ.ಎಸ್.ಪಿ.ಮ್ಯಾಥ್ಯೂ ಥಾಮಸ್  ಸೂಚನೆ ಮೇರೆಗೆ ಇನ್ ಪೆಕ್ಟರ್ ಗಳಾದ ಶಶಿಕುಮಾರ್, ರವಿಕುಮಾರ್  ಅವರು ಆಸ್ಪತ್ರೆ ಮತ್ತು  ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲೋಕಯುಕ್ತ ಅಧಿಕಾರಿಗಳು ಬೇಗೂರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದು ನಂತರ ವಸತಿ ನಿಲಯಕ್ಕೆ ಭೇಟಿ ನೀಡಿ ಅಡುಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.

Key words: Residential school-children -sick -eating –meat- Lokayukta officials -visit