ಜಾತಿ ಜನಗಣತಿ ವರದಿ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ.

ದಾವಣಗೆರೆ,ಸೆಪ್ಟಂಬರ್,29,2021(www.justkannada.in): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ಜಾತಿ ಜನಗಣತಿ ವರದಿಯನ್ನು ಬಿಡುಗಡೆಗೆ ಆಗ್ರಹಿಸಿ ಇಂದು ದಾವಣಗೆರೆಯ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಲಾಯಿತು.

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ವತಿಯಿಂದ ನಡೆದ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ. ರಾಜ್ಯಾಧ್ಯಕ್ಷರಾದ ಕೆ. ಎಸ್. ಶಿವರಾಮು  ಮತ್ತು ತಂಡ ಭಾಗವಹಿಸಿ ಪ್ರತಿಭಟನೆಯನ್ನ ಬೆಂಬಲಿಸಿದರು.

ಈ ಪ್ರತಿಭಟನೆಯಲ್ಲಿ. ಒಕ್ಕೂಟದ ಅಧ್ಯಕ್ಷ  ರಾಮಚಂದ್ರಪ್ಪ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ. ಸುಬ್ರಮಣ್ಯ. ಮುಖಂಡ  ಲೋಕೆಶ್ ಕುಮಾರ್, ದೀಪಕ್ ಪುಟ್ಟಸ್ವಾಮಿ, ವಿನೋದ್ ರಾಜ್, ಮಂಜುನಾಧ್. ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ ಡಿ. ಲಕ್ಷೀನಾರಯಣ್ ರವರು ಭಾಗವಹಿಸಿದ್ದರು.

Key words: Protest – release -caste census report-davanagere