ನಾಯಕತ್ವ ಬದಲಾವಣೆ ಇಲ್ಲ: ಎರಡು ವರ್ಷ ಬಿಎಸ್ ವೈ ಅವರೇ ಸಿಎಂ-ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು,ಜೂ.14,2021(www.justkannada.in):  ನಾಯಕತ್ವ ಬದಲಾವಣೆಯ ಚರ್ಚೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೇರಿದಾಗಿನಿಂದಲೂ ಈ ಚರ್ಚೆಯಿದೆ. ಆದರೆ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅರುಣ್ ಸಿಂಗ್ ನಾಯಕತ್ವ ಬದಲಾವಣೆಯಾಗಲೀ ಮುಖ್ಯಮಂತ್ರಿಯ ಬದಲಾವಣೆಯಾಗಲೀ ಇಲ್ಲಎಂದು ಸ್ಪಷ್ಟಪಡಿಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.jk

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಿ.ಸಿ.ಪಾಟೀಲ್, ಜೂನ್ 16 ರಂದು ಉಸ್ತುವಾರಿಗಳು ಸಭೆ ಕರೆದಿದ್ದಾರಾದರೂ ಚರ್ಚೆಯ ವಿಷಯ ಗೊತ್ತಿಲ್ಲ.ಸಚಿವರ ಸಭೆಯದು. ಅದರಲ್ಲಿ ತಾವು ಸಹ ಭಾಗವಹಿಸುತ್ತಿದ್ದೇನೆ.ಇನ್ನೂ ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಲಿದ್ದು, ಇದನ್ನೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಸಹ ತಿಳಿಸಿದ್ದಾರೆ. ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ಕೈಗೊಂಡರೂ ಎಲ್ಲರೂ ಅದಕ್ಕೆ ಬದ್ಧರಾಗಬೇಕು ಎಂದರು.formation-corporation-development-communities-minister-bc-patil

Key words: no leadership –change-Two years- BS yeddyurappa- cm-Minister -B.C. Patil