Tuesday, September 22, 2026

BDA Apartments

ಆರ್’ಸಿಬಿಯ ಏಕೈಕ ಕನ್ನಡಿಗ ಪವನ್ ದೇಶಪಾಂಡೆ ! BDA JK_Adv BDA Adv
Home Front Page ಆರ್’ಸಿಬಿಯ ಏಕೈಕ ಕನ್ನಡಿಗ ಪವನ್ ದೇಶಪಾಂಡೆ !

ಆರ್’ಸಿಬಿಯ ಏಕೈಕ ಕನ್ನಡಿಗ ಪವನ್ ದೇಶಪಾಂಡೆ !

ಬೆಂಗಳೂರು, ಡಿಸೆಂಬರ್ 20, 2019 (www.justkannada.in): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಏಕೈಕ ಕನ್ನಡಿಗ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿದ ಪವನ್ ದೇಶಪಾಂಡೆ.

ಪವನ್ ದೇಶಪಾಂಡೆ ಅವರನ್ನು 20 ಲಕ್ಷಕ್ಕೆ ಆರ್ ಸಿಬಿ ತಂಡ ಪಡೆದಿದೆ. ಈ ಮೂಲಕ ಆರ್ ಸಿಬಿ ಖರೀದಿಸಿದ ಏಕೈಕ ಕನ್ನಡಿಗ ಎಂಬ ಗೌರವಕ್ಕೆ ದೇಶಪಾಂಡೆ ಪಾತ್ರರಾದರು.

ಹರಾಜು ಪ್ರಕ್ರಿಯೆಯಲ್ಲಿ 10 ಕೋಟಿ ರೂ. ನೀಡಿ ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್ ಅವರನ್ನು ಖರೀದಿಸಿದೆ.
ಮಾರಿಸ್ ನಂತರದ ಸ್ಥಾನ ಆಸ್ಟ್ರೇಲಿಯಾದ ನಾಯಕ ಏರಾನ್ ಫಿಂಚ್ ಗೆ. ಫಿಂಚ್ ಮೂಲಬೆಲೆ 1 ಕೋಟಿ ರೂ. ಇದ್ದರೂ ಆರ್ ಸಿಬಿ 4.4 ಕೋಟಿ ರೂ. ನೀಡಿ ಖರೀದಿಸಿದೆ.

ಮತ್ತೊಬ್ಬ ಆಸ್ಟ್ರೇಲಿಯಾದ ಆಟಗಾರ ಕೇನ್ ರಿಚರ್ಡ್ಸನ್ 1.5 ಕೋಟಿ ರೂ. ಮೂಲಬೆಲೆ ಇದ್ದರೂ 4 ಕೋಟಿ ರೂ.ಗೆ ಪಡೆದಿದೆ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಅವರನ್ನು ಕೂಡ 2 ಕೋಟಿಗೆ ಖರೀದಿಸಿದೆ.