ಟೀಂ ಇಂಡಿಯಾ ಕೋಚ್: ರವಿಶಾಸ್ತ್ರಿ ಮುಂದುವರಿಕೆ ಸಾಧ್ಯತೆ

ಮುಂಬೈ, ಆಗಸ್ಟ್ 07, 2019 (www.justkannada.in): ರವಿಶಾಸ್ತ್ರೀ ಅವರೇ ಭಾರತದ ಕೋಚ್‌ ಆಗಿ ಮುಂದುವರಿಯುವ ಸಾಧ್ಯತೆಯಿದೆ.

ಈ ಕುರಿತಾದ ಸುಳಿವೊಂದು ಕ್ರಿಕೆಟ್‌ ಸಲಹಾ ಸಮಿತಿಯಿಂದ ಸಿಕ್ಕಿದೆ. ಹೊಸ ಕೋಚ್‌ ನೇಮಕಾತಿಗೆ ಈಗಾಗಲೇ ಅರ್ಜಿ ಸ್ವೀಕರಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಜವಾಬ್ದಾರಿಯನ್ನು ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಒಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಜವಾಬ್ದಾರಿ ವಹಿಸಿಕೊಂಡಿದೆ.

ಈ ನಡುವೆ ಸಿಎಸಿ ಸಮಿತಿಯ ಅಧಿಕಾರಿಯೊಬ್ಬರ ಪ್ರಕಾರ ಈ ಸಲ ವಿದೇಶಿ ಕೋಚ್‌ಗೆ ಮಣೆ ಹಾಕುವುದು ಅನುಮಾನ. ಮೊದಲ ಅವಕಾಶ ಭಾರತೀಯರಿಗೆ ನೀಡುವ ಸಾಧ್ಯತೆಯೇ ಹೆಚ್ಚು ಎಂದಿದ್ದಾರೆ.