Monday, October 5, 2026

BDA Apartments

ಪುರಸಭೆ ಕಾರ್ಯಾಲಯ ಕೆ.ಆರ್ ನಗರ BDA JK_Adv BDA Adv
Home Front Page ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ಮಾಡಿದ್ದು ಖಂಡನೀಯ-ಶಾಸಕ ಅಶ್ವಥ್ ನಾರಾಯಣ್.

ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ಮಾಡಿದ್ದು ಖಂಡನೀಯ-ಶಾಸಕ ಅಶ್ವಥ್ ನಾರಾಯಣ್.

ಬೆಂಗಳೂರು,ಜೂನ್,14,2023(www.justkannada.in): ಬಿಬಿಎಂಪಿ ಚುನಾವಣೆ ತಯಾರಿ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಿನ್ನೆ ನಡೆದ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್, ಕಾಂಗ್ರೆಸ್ ವರಿಷ್ಠರು ಅಧಿಕಾರಿಗಳ ಸಭೆ ಮಾಡಿರುವುದು ಖಂಡನೀಯ.  ಕಾಂಗ್ರೆಸ್ ನವರ ನಿಜವಾದ ಉದ್ದೇಶ ಏನು ಅಂತಾ ಗೊತ್ತಾಗುತ್ತಿಲ್ಲ ಅಧಿಕಾರಿಗಳ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಭಾಗವಹಿಸುವಂತಿಲ್ಲ.  ಸಭೆಯಲ್ಲಿ ಸುರ್ಜೇವಾಲ ಭಾಗವಹಿಸಿದ್ದು ಕಾನೂನು ಉಲ್ಲಂಘನೆ ಎಂದರು.ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ಮಾಡಿದ್ದು ಖಂಡನೀಯ-ಶಾಸಕ ಅಶ...

ಸುರ್ಜೇವಾಲ ಪರ್ಸೆಂಟೇಜ್ ಡೀಲ್ ಗೇನೋ ಸಭೇ ನಡೆಸಿರಬಹುದು ಎಂದು ಅಶ್ವಥ್ ನಾರಾಯಣ್ ವ್ಯಂಗ್ಯವಾಡಿದರು.

Key words: Randeep Singh Surjewala – meeting – officials-condemned-MLA- Ashwath Narayan.