Sunday, September 13, 2026

BDA Apartments

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರ...
Home Front Page  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು…

 ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು…

ಬೆಂಗಳೂರು,ಮಾರ್ಚ್,3,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಡುಗಡೆ ಮಾಡಿ ದೂರು ನೀಡಿದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.jk

ಕರ್ನಾಟಕ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ ಎಂಬುವವರು ದಿನೇಶ್ ಕಲ್ಲಹಳ್ಳಿ ವಿರುದ್ಧವೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಸಲೀಲೆ ಸಿಡಿ ರಿಲೀಸ್ ಮಾಡಿದ್ದು ರಾಜಕೀಯ ಷಡ್ಯಂತ್ರ. ರಾಸಲೀಲೆ ಪ್ರಕರಣಕ್ಕೂ ದಿನೇಶ್ ಕಲ್ಲಳ್ಳಿಗೂ ಯಾವುದೇ ಸಂಬಂಧವಿಲ್ಲ. ರಾಜಕೀಯ ಷಡ್ಯಂತ್ರದಿಂದ ಸಚಿವರ ತೇಜೋವಧೆ ಮಾಡಲಾಗಿದೆ ಎಂದು ಪುಟ್ಟೇಗೌಡ ಆರೋಪಿಸಿದ್ದಾರೆ.

ramesh-jarakihili-rasalee-cd-case-complaint-against-dinesh-kallahalli
ಕೃಪೆ- internet

ಅಲ್ಲದೆ ವಿಡಿಯೋವನ್ನ ಸಂಪೂರ್ಣ ಎಡಿಟ್ ಮಾಡಲಾಗಿದೆ. ಈ ದೃಶ್ಯ ನೋಡಿದರೇ  ಸಮ್ಮತಿಯ ಸೆಕ್ಸ್ ಥರ ಕಾಣಿಸುತ್ತಿದೆ. ಅನ್ಯಾಯವಾಗಿದ್ರೆ ಯುವತಿ ಏಕೆ ದೂರು ನೀಡಲಿಲ್ಲ. ವಿಡಿಯೋ ಎಡಿಟ್ ಮಾಡಿದ್ದು ಯಾರು ಎಂಬ ಬಗ್ಗೆ  ವಿಚಾರಣೆ ನಡೆಯಬೇಕು. ಹೀಗಾಗಿ ದಿನೇಶ್ ಕಲ್ಲಳ್ಳಿ ಅವರನ್ನ ವಿಚಾರಣೆಗೊಳಪಡಿಸಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Key words: Ramesh jarakihili-Rasalee -CD case- Complaint -against -Dinesh Kallahalli