Thursday, September 17, 2026

BDA Apartments

ಮುಂಗಾರು ಮಳೆ ಮತ್ತಷ್ಟು ಚುರುಕು: 100 ಅಡಿ ಭರ್ತಿಯಾದ KRS ಜಲಾಶಯ BDA JK_Adv BDA Adv
Home Front Page ಮುಂಗಾರು ಮಳೆ ಮತ್ತಷ್ಟು ಚುರುಕು: 100 ಅಡಿ ಭರ್ತಿಯಾದ KRS ಜಲಾಶಯ

ಮುಂಗಾರು ಮಳೆ ಮತ್ತಷ್ಟು ಚುರುಕು: 100 ಅಡಿ ಭರ್ತಿಯಾದ KRS ಜಲಾಶಯ

ಮಂಡ್ಯ,ಆಗಸ್ಟ್,3,2026 (www.justkannada.in):  ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕುಗೊಂಡಿದ್ದು ಈ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 124  ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ  ಕೆಆರ್ ಎಸ್ ಜಲಾಶಯ  ಇದೀಗ 100 ಅಡಿ ಭರ್ತಿಯಾಗಿದೆ. ಕಳೆದ ಕೇವಲ ಮೂರು ದಿನದ ಅಂತರದಲ್ಲಿ ಕೆಆರ್ ಎಸ್ ಜಲಾಶೈದ ನೀರಿನ ಮಟ್ಟ 8 ಅಡಿ ಏರಿಕೆ ಕಂಡಿದೆ.ಮುಂಗಾರು ಮಳೆ ಮತ್ತಷ್ಟು ಚುರುಕು BDA JK_Adv BDA Adv

ಜಲಾಶಯಕ್ಕೆ ಅಪಾರ ಪ್ರಮಾಣದ ಒಳಹರಿವು ಬರುತ್ತಿದ್ದು    ಸದ್ಯ ಕೆಆರ್ ಎಸ್ ಡ್ಯಾಂಗೆ 32,048 ಕ್ಯೂಸೆಕ್ ನೀರು ಒಳಹರಿವು ಇದೆ. ಇದೇ ರೀತಿ ಮಳೆಯಾದರೇ  ಕೆಆರ್ ಎಸ್ ಜಲಾಶಯ ಭರ್ತಯಾಗಲಿದ್ದು ರೈತರು ಮುಖದಲ್ಲಿ ಮಂದಹಾಸ ಮೂಡಿದೆ.

ಇತ್ತೀಚೆಗೆ ತಮಿಳುನಾಡಿಗೆ 3500 ಕ್ಯೂಸೆಕ್ ಪ್ರತಿನಿತ್ಯ 15 ದಿನಗಳವರೆಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿತ್ತು.100 ಅಡಿ ಭರ್ತಿಯಾದ KRS ಜಲಾಶಯ jk02_new jk02 new

Key words: Rains, KRS reservoir, filled , 100 feet