Monday, October 12, 2026

Dasara Wishes

Happy Dasara
Home Front Page ಮೈಸೂರಿನಲ್ಲಿ ದೀಪಾವಳಿ ಸಂಭ್ರಮಾಚರಣೆಗೆ ಮಳೆ ಅಡ್ಡಿ.

ಮೈಸೂರಿನಲ್ಲಿ ದೀಪಾವಳಿ ಸಂಭ್ರಮಾಚರಣೆಗೆ ಮಳೆ ಅಡ್ಡಿ.

ಮೈಸೂರು,ನವೆಂಬರ್,5,2021(www.justkannada.in):  ಮೈಸೂರಿನಲ್ಲಿ ಮತ್ತೆ ಮಳೆಯಾಗಿದ್ದು, ದೀಪಾವಳಿ ಸಂಭ್ರಮಾಚರಣೆಗೆ ಮಳೆ ಅಡ್ಡಿಯುಂಟು ಮಾಡಿದೆ.

ಮೈಸೂರಿನ ಹಲವೆಡೆ ವರುಣನ ಆರ್ಭಟ ಹೆಚ್ಚಾಗಿದ್ದು, ಬೆಳಗಿನಿಂದಲೂ ಮೋಡ‌ ಕವಿದ ವಾತಾವರಣ‌ವಿತ್ತು.  ಬೆಳಗ್ಗೆಯಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮಧ್ಯಾಹ್ನವಾಗುತ್ತಿದ್ದಂತೆ ಮತ್ತೆ ಜೋರಾಗಿದ್ದಾನೆ. ಹೀಗಾಗಿ ಮೈಸೂರಿನಲ್ಲಿ ಮತ್ತೆ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದ್ದು, ಮಳೆಯಿಂದ ಜನ-ಜೀವನ ಅಸ್ತವ್ಯಸ್ತ ಉಂಟಾಗಿದೆ. ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಈ ಮೂಲಕ ದೀಪಾವಳಿ ವ್ಯಾಪಾರ ವಹಿವಾಟಿಗೆ ಮಳೆರಾಯ ಅಡ್ಡಿಯಾಗಿದ್ದಾನೆ.

Ke words: Rain- disrupts- Diwali- celebration – Mysore