ಮೈಸೂರು,ಜುಲೈ,11,2026 (www.justkannada.in): ಮೈಸೂರು ದಸರಾದಲ್ಲಿ ಕಂಬಳ ಬೇಡ ಅಂತ ಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಂಸದ ಯದುವೀರ್, ಕಂಬಳ ಬೇಡ ಅಂತ ಸಿಎಂ ಬಳಿ ತಿಳಿಸಿದ್ದೇನೆ. ಕಂಬಳ ಕುರಿತು ಎರಡು ವಾರದಿಂದ ಸಾಕಷ್ಟು ಚರ್ಚೆಗಳಾಗುತ್ತಿವೆ. ಆದರೆ ಕರಾವಳಿ ಭಾಗದ ಆಚರಣೆ ಮೈಸೂರಿಗೆ ಬೇಡ. ಇದೊಂದು ಅನವಶ್ಯಕವಾದ ಬೆಳವಣಿಗೆ. ಬೇಕಿದ್ದರೇ ಕರಾವಳಿ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಮಾಡಲಿ. ಮೈಸೂರಿನವರು ಅದಕ್ಕೆ ಕೈ ಜೋಡಿಸುತ್ತೇವೆ. ಮೈಸೂರು ಭಾಗದಲ್ಲಿ ಬೇಡ ಅಂತ ಮನವರಿಕೆ ಮಾಡಿದ್ದೇವೆ. ಸಿಎಂ ಕೂಡ ಅಗತ್ಯಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ದಸರಾ ವೇಳೆ ದಸರಾಗೆ ಪ್ರಾಮುಖ್ಯತೆ ನೀಡಬೇಕಿದೆ. ಸರ್ಕಾರ ಸಾರ್ವಜನಿಕ ಅಭಿಪ್ರಾಯದಂತೆ ದಸರಾ ಮಾಡಲಿ. ಕಳೆದ ದಸರಾ ವೇಳೆ ಎರಡು ಕೊಲೆಗಳು ಆಗಿದ್ದವು. ಅಪ್ರಾಪ್ತ ಬಾಲಕಿ ಹತ್ಯೆ ಕ್ರೂರವಾಗಿತ್ತು. ಆ ಕಾರಣಕ್ಕೆ ರಕ್ಷಣೆ ಹೆಚ್ಚಳ ಮಾಡಿ ಅಂತ ಮನವಿ ಮಾಡಿದ್ದೇನೆ ಎಂದು ಸಂಸದ ಯದುವೀರ್ ತಿಳಿಸಿದರು.
ಈ ಬಾರಿ 11 ದಿನಗಳ ಕಾಲ ದಸರಾ ನಡೆಯಲಿದೆ. ಅರಮನೆಯ ಕ್ಯಾಲೆಂಡರ್ ಪ್ರಕಾರವೇ ಜರುಗಲಿದೆ. ದಸರಾ ಆನೆಗಳ ರಕ್ಷಣೆಗೂ ಒತ್ತು ನೀಡುವಂತೆ ಮನವಿ ಮಾಡಿದ್ದೇನೆ.ಈ ಬಾರಿ ದಸರೆಯಲ್ಲಿ ದಸರಾ ಪಾಸ್ ಬೇಡ. ಈ ಬಾರಿ ದಸರೆಯಲ್ಲಿ ಕ್ರೈಂಗಳನ್ನ ತಪ್ಪಿಸಿ. ಪಾಸ್ ಗಾಗಿ ನೂಕು ನುಗ್ಗಲು ಯತ್ನ ನಿಲ್ಲಿಸಿ ಎಂದು ಸಂಸದ ಯದುವೀರ್ ಮನವಿ ಮಾಡಿದರು.
Key words: no Kambala, Mysore Dasara, MP Yaduveer, CM







