Tuesday, September 22, 2026

BDA Apartments

ಮಳೆ ಹಿನ್ನೆಲೆ: ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮುಂದೂಡಿಕೆ… BDA...
Home Front Page ಮಳೆ ಹಿನ್ನೆಲೆ: ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮುಂದೂಡಿಕೆ….

ಮಳೆ ಹಿನ್ನೆಲೆ: ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮುಂದೂಡಿಕೆ….

ಬೆಂಗಳೂರು, ಜೂ.22,2019(www.justkannada.in):  ಮಳೆ ಹಿನ್ನೆಲೆ ಕಲ್ಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಹೆರೂರು ಗ್ರಾಮದಲ್ಲಿ ನಿಗದಿಯಾಗಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನ ಮುಂದೂಡಲಾಗಿದೆ.

ನಿನ್ನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಂಡರಕಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಲ್ಲೆ ವಾಸ್ತವ್ಯ ಹೂಡಿ ಗ್ರಾಮಸ್ಥರ ಸಮಸ್ಯೆಗಳನ್ನ ಆಲಿಸಿ ಮನವಿ ಸ್ವೀಕರಿಸಿದರು. ಈ ನಡುವೆ ಚಂಡರಕಿ ಗ್ರಾಮದಿಂದ ಹೆರೂರು ಗ್ರಾಮದಲ್ಲಿ ಗ್ರಾಮವಾಸ್ತವ್ಯಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೋಗಬೇಕಿತ್ತು.

ಆದರೆ ಕಲ್ಬುರ್ಗಿಯಲ್ಲಿ ಭಾರಿ ಮಳೆಯಾಗಿದ್ದು, ಈ ಹಿನ್ನೆಲೆ ಸಿಎಂ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ವೇದಿಕೆ ಸುತ್ತ ನೀರು ತುಂಬಿದೆ.  ಹೀಗಾಗಿ ಸಿಎಂ ಗ್ರಾಮವಾಸ್ತವ್ಯವನ್ನ ಮುಂದೂಡಲಾಗಿದ್ದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಚಂಡರಕಿ ಗ್ರಾಮದಿಂದ  ತೆರಳಿದ್ದಾರೆ. ಸಿಎಂ ತೆರಳುವ ವೇಳೆ ಗ್ರಾಮಸ್ಥರ ಬಳಿ ಮನವಿ ಸ್ವೀಕರಿಸಿದ್ದಾರೆ. ಇನ್ನು ಮುಂದಿನ ಗ್ರಾಮವಾಸ್ತವ್ಯಕ್ಕೆ ಶೀಘ್ರವೇ ದಿನಾಂಕ ನಿಗದಿ ಮಾಡಲಿದ್ದಾರೆ.

 

Key words: Rain -CM HD Kumaraswamy -Grammavastavya -Postponed