ಬೆಂಗಳೂರಿನ ಹಲವೆಡೆ ಮಳೆರಾಯನ ಆರ್ಭಟ: ವಾಹನ ಸವಾರರ ಪರದಾಟ.   

ಬೆಂಗಳೂರು, ಮೇ,10,2024 (www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಐದಾರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಈ ನಡುವೆ ಇಂದು ಸಹ ಬೆಂಗಳೂರಿನ ಹಲವೆಡೆ ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಗರದ ಪೀಣ್ಯ, ದಾಸರಹಳ್ಳಿ, ಮಲ್ಲಸಂದ್ರ, ಮಾಕಳಿ, ಚಿಕ್ಕಬಿದರಕಲ್ಲು ಸೇರಿದಂತೆ ಹಲವೆಡೆ ಮಳೆಯಾಗಿದ್ದು ಉಳಿದ ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಳೆಯಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದ್ದು ಸಂಚಾರದಲ್ಲಿ ವ್ಯತ್ಯಯವಾಗಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂದಗತಿಯಲ್ಲಿ ವಾಹನಗಳು ಸಂಚಾರ ನಡೆಸುತ್ತಿದ್ದರಿಂದ 8ನೇ ಮೈಲಿ ನವಯುಗ ಟೋಲ್​ನಿಂದ ಮಾದವಾರವರೆಗೆ ಫುಲ್​ ಟ್ರಾಫಿಕ್ ಜಾಮ್​ ಉಂಟಾಗಿತ್ತು.

ಇನ್ನು ನಿನ್ನೆ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಈ ಹಿನ್ನಲೆ ಈ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಚೈನ್ನೈ ಕಡೆಗೆ ಡೈವರ್ಟ್ ಮಾಡಲಾಗಿತ್ತು.

Key words: rain – Bengaluru-Motorists-traffic