Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Cinema ಭಾರತೀಯ ಸಿನಿಮಾ ರಂಗದಲ್ಲಿ ‘ಶ್ರೀಮನ್ನಾರಾಯಣ’ ಹವಾ!

ಭಾರತೀಯ ಸಿನಿಮಾ ರಂಗದಲ್ಲಿ ‘ಶ್ರೀಮನ್ನಾರಾಯಣ’ ಹವಾ!

ಬೆಂಗಳೂರು, ನವೆಂಬರ್ 29, 2019 (www.justkannada.in): ಅವನೇ ಶ್ರೀಮನ್ನಾರಾಯಣ ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ ಬರಲಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗ ಐದೂ ಭಾಷೆಗಳಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ.

ಕೆ.ಜಿ.ಎಫ್ ನಂತರ ಭಾರತೀಯ ಚಿತ್ರರಂಗದಲ್ಲಿ ಸೌಂಡು ಮಾಡುತ್ತಿರುವ ಕನ್ನಡ ಚಿತ್ರರಂಗ ಅವನೇ ಶ್ರೀಮನ್ನಾರಾಯಣನ ಮೂಲಕ ಮತ್ತೊಂದು ಹೆಜ್ಜೆ ಮುನ್ನಡೆದಿದೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನ ಚಿತ್ರೀಕರಣಗೊಂಡ ಸಿನಿಮಾ ಆಗಿ ಕೂಡಾ ಅವನೇ ಶ್ರೀಮನ್ನಾರಾಯಣ ದಾಖಲೆ ನಿರ್ಮಿಸಿದೆ.

ರಕ್ಷಿತ್ ಶೆಟ್ಟಿ ಕಳೆದ ಮೂರು ವರ್ಷಗಳ ಪರಿಶ್ರಮ, ಅದಕ್ಕೆ ಸಹಕರಿಸಿದ ನಿರ್ಮಾಪಕ ಪುಷ್ಕರ್ ಮತ್ತು ಶಂಕರ್, ನಿರ್ದೇಶಕ ಸಚಿನ್ ಮತ್ತು ಇಡೀ ಚಿತ್ರತಂಡದ ಕಷ್ಟವನ್ನು ನೆನೆದು ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟರು.