ಸಮಸ್ಯೆಗಳನ್ನು ಮರೆ ಮಾಚಲು ಸಾಧ್ಯವಿ:ಲ್ಲ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಬೆಂಗಳೂರು, ಜೂನ್ 26, 2022 (www.justkannada.in): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್, ಪ್ರಾವೀಣ್ಯತೆಯಿಂದ ಸಮಸ್ಯೆಗಳನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಸಾರ್ವಕಾಲಿಕ ನಿರುದ್ಯೋಗ ಹೆಚ್ಚಳ, ಅತ್ಯಕ ಸಗಟು ಬೆಲೆ ಸೂಚ್ಯಂಕ ಸಮಸ್ಯೆ, ಎಲ್‍ಐಸಿ 17 ಶತಕೋಟಿ ಅಪಮೌಲ್ಯೀಕರಣದಂತಹ ವಿಪತ್ತುಗಳನ್ನು ಮರೆಮಾಡಲು ಮೋದಿ ಅವರಿಗೆ ಸಾಧ್ಯವಿಲ್ಲ ಎಂದಿದ್ದಾರೆ.

ಭಾರತದ ಜನಸಾಮಾನ್ಯರು ದಿನದ ಬದುಕು ನಡೆಸಲು ಸಂಘರ್ಷ ಮಾಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ, ಮುಂದೆ ಮತ್ತೊಂದು ವಿಪತ್ತು ಸೃಷ್ಟಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ರೂಪಾಯಿ ಮೌಲ್ಯ ಡಾಲರ್ ಎದುರು 78 ರೂ.ಗೆ ಕುಸಿದಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‍ಐಸಿ) ಮೌಲ್ಯ 17 ಬಿಲಿಯನ್ ಡಾಲರ್ ನಷ್ಟವಾಗಿದೆ. ಸಗಟು ಮಾರಾಟ ಸೂಚ್ಯಂಕ 30 ವರ್ಷದಲ್ಲೇ ಅತ್ಯಕ ಹೆಚ್ಚಳವಾಗಿದೆ. ನಿರುದ್ಯೋಗ ಸರ್ವಕಾಲಿಕ ದಾಖಲೆಯಾಗಿದೆ. ಆದರೆ ಪ್ರಧಾನಿಗಳಿಗೆ ಈ ಬಗ್ಗೆ ಚಿಂತೆ ಇಲ್ಲ ಎಂದು ಟೀಕಿಸಿದ್ದಾರೆ.