ಮಾ.16 ರಿಂದ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ.

ನವದೆಹಲಿ,ಮಾರ್ಚ್,14,2022(www.justkannada.in):  ಮಾರ್ಚ್ 16 ರಿಂದ 12 ರಿಂದ 14  ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು,  ಇದೇ ಮಾರ್ಚ್‌ 16ರಿಂದ 12-14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ  ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ‘ಮುನ್ನೆಚ್ಚರಿಕೆ ಡೋಸ್’ ನೀಡಲಾಗುವುದು’  ಎಂದು ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಕಳೆದ ಜನವರಿಯಿಂದ ದೇಶದಲ್ಲಿ  ಉಚಿತ ಕೊವಿಡ್ ಲಸಿಕೆ ಅಭಿಯಾನ ನಡೆಯುತ್ತಿದ್ದು ಹಂತ ಹಂತವಾಗಿ ದೇಶದ ಜನರಿಗೆ ಕೊರೋನಾ ವ್ಯಾಕ್ಸಿನ್ ಹಾಕಲಾಗುತ್ತಿದೆ. ಇನ್ನು ದೇಶದಲ್ಲಿ ಕೊರೊನಾ ವೈರಸ್ʼನ ಒಮಿಕ್ರಾನ್‌ ರೂಪಾಂತರದ ಹೆಚ್ಚಳದ ನಡುವೆ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಆರಂಭಿಸಲು ನಿರ್ಧರಿಸಲಾಗಿತ್ತು. ಸಧ್ಯ ಇದೇ ಮಾರ್ಚ್‌ 16ರಿಂದ 12-14 ವರ್ಷ ವಯಸ್ಸಿನವರಿಗೆ ಕೋವಿಡ್-19 ಲಸಿಕೆ ಮತ್ತು 60 ವರ್ಷ ಮೇಲ್ಪಟ್ಟ ಎಲ್ಲರಿಗೂ ‘ಮುನ್ನೆಚ್ಚರಿಕೆ ಡೋಸ್’ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

Key words: Covid Vaccine – children –march 16