ಯೋಗೇಶ್ವರ್ ಜತೆ ಬಹಿರಂಗ ಚರ್ಚೆಗೆ ಸಿದ್ಧ: ಸವಾಲು ಸ್ವೀಕರಿಸಿದ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಮಾರ್ಚ್,14,2022(www.justkannada.in):  ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದ ವೇಳೆ ರಾಸಲೀಲೆ ಆಡಿಕೊಂಡಿದ್ದರು. ನೇರವಾಗಿ ನಾನು ದಾಖಲೆ ಇಟ್ಟಕೊಂಡು ಮಾತನಾಡುತ್ತೇನೆ. ವೈಯಕ್ತಿಕ ಹಾಗೂ ಸಾರ್ವಜನಿಕ ವಿಚಾರಗಳನ್ನು ಬಹಿರಂಗವಾಗಿ ಮಾತಾಡೋಣ ಎಂದು ಸವಾಲು ಹಾಕಿದ್ಧ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ಆಮಿ ತಿರುಗೇಟು ನೀಡಿದ್ದಾರೆ.

ಸಿ.ಪಿ ಯೋಗೇಶ್ವರ್ ಹೇಳಿಕೆ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರೆಸ್ಟ್ ಮಾಡಲು ನಾನು ಹೋಟೆಲ್ ಗೆ ಹೋಗುತ್ತಿದ್ದೆ. ನಾನೂ ಈಗಲೂ ತಾಜ್ ವೆಸ್ಟ್  ಎಂಡ್ ಹೊಟೇಲ್ ಗೆ  ಹೋಗುತ್ತೇನೆ ಯೋಗೇಶ್ವರ್  ಹೇಳಿದಂತೆ ರಾಸಲೀಲೆಗೆ ಅಲ್ಲ.  ರೆಸ್ಟ್ ಮಾಡಲು.  ಸಿಎಂ ಆಗಿದ್ದಾಗ ಜನರು ಬಂದು ನನ್ನನ್ನ  ಭೇಟಿ ಮಾಡುತ್ತಿದ್ದರು.

 

ಯೋಗೇಶ್ವರ್ ಜತೆಗೆ ಬಹಿರಂಗ ಚರ್ಚೆಗೆ ಸಿದ್ಧ.  ಚನ್ನಪಟ್ಟಣದಲ್ಲೇ ಚರ್ಚಿಸೋಣ.  ನಾನು ಜೀವನದಲ್ಲಿ ಒಮ್ಮೆ ತಪ್ಪು ಮಾಡಿದ್ದೇನೆ. ಅದನ್ನ ಸದನದಲ್ಲಿ ಒಪ್ಪಿಕೊಂಡಿದ್ದೇನೆ. ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯವುಲ್ಲ. ನನ್ನ ಜೀವನ ತೆರೆದ ಪುಸ್ತಕ ಎಂದು ಟಾಂಗ್ ನೀಡಿದರು.

Key words: Ready – open-discussion-HD Kumaraswamy