ಜರ್ಮನಿ ಪ್ರವಾಸದಲ್ಲಿ ಮೋದಿ: ಭಾರತೀಯರಿಂದ ಭವ್ಯ ಸ್ವಾಗತ

ಬೆಂಗಳೂರು, ಜೂನ್ 26, 2022 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಎರಡು ದಿನಗಳ ಜರ್ಮನಿ ಪ್ರವಾಸದಲ್ಲಿದ್ದಾರೆ.

ಪ್ರಧಾನಿ ಮೋದಿ ಅವರನ್ನು ನೋಡಿದ ಭಾರತೀಯರು ತಮ್ಮ ಮಕ್ಕಳೊಂದಿಗೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುವುದರೊಂದಿಗೆ ಪಿಎಂಗೆ ಸ್ವಾಗತ ಕೋರಿದ್ದಾರೆ. ಈ ವೇಳೆ ಮೋದಿ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು ಭಾರತೀಯ ಧ್ವಜದ ರೇಖಾಚಿತ್ರಕ್ಕೆ ಆಟೋಗ್ರಾಫ್ ನೀಡಿದರು.

ಇಂದು ಮತ್ತು ನಾಳೆ ಪ್ರಧಾನಿ ಮೋದಿ ಅವರು ಜಿ7 ಮತ್ತು ಅತಿಥಿ ರಾಷ್ಟ್ರಗಳೊಂದಿಗೆ ಹವಾಮಾನ, ಇಂಧನ, ಆಹಾರ ಭದ್ರತೆ, ಆರೋಗ್ಯ, ಲಿಂಗ ಸಮಾನತೆ ಸೇರಿದಂತೆ ಸಮಕಾಲೀನ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ನಂತ್ರ, ಜೂನ್‌ 28 ಯುಎಇ ಗೂ ಭೇಟಿ ನೀಡಲಿದ್ದಾರೆ.

ತಾವು ತಂಗಲಿರುವ ಮ್ಯೂನಿಚ್‌ನ ಹೋಟೆಲ್‌ನಲ್ಲಿ ಭಾರತೀಯ ವಲಸಿಗರಿಂದ ಭವ್ಯ ಸ್ವಾಗತ ಪಡೆದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.