ಮುಸ್ಲಿಂ ಗೂಂಡಾಗಳಿಂದಲೇ ಹರ್ಷ ಕೊಲೆ: ವಿವಾದದ ಬೆಂಕಿಗೆ ತುಪ್ಪ ಸುರಿದ ಸಚಿವ ಈಶ್ವರಪ್ಪ ಹೇಳಿಕೆ

ಬೆಂಗಳೂರು, ಫೆಬ್ರವರಿ 22, 2022 (www.justkannada.in): ಮುಸ್ಲಿಂ ಗೂಂಡಾಗಳೇ ಹರ್ಷ ಕೊಲೆ ಮಾಡಿದ್ದಾರೆ ಅಂತ ಸಚಿವ ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಖುದ್ದು ಎಸ್‌ಪಿ ಈ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ, ಹೀಗಾಗಿ ನಾನು ಮುಸ್ಲಿಂ ಗೂಂಡಾಗಲೇ ಹರ್ಷ ಕೊಲೆ ಮಾಡಿದ್ದಾರೆ ಅಂತ ನಾನು ಹೇಳಿದ್ದೆ ಅಂತ ಹೇಳಿದ್ದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳವುಂತೆ ತಿಳಿಸಲಾಗಿದೆ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಸಮಾಜಘಾತುಕ ಶಕ್ತಿಗಳ ಕೆಲಸ: ಈ ನಡುವೆ ಹರ್ಷ ಕೊಲೆಗೆ ಕಾರಣವಾಗಿರುವುದು ಶಿವಮೊಗ್ಗದಲ್ಲಿ ಇನ್ನೂ ಸಮಾಜಘಾತುಕ ಶಕ್ತಿಗಳು ಇರುವುದನ್ನು ತೋರಿಸುತ್ತದೆ ಅಂತ ಕಂದಾಯ ಸಚಿವ ಆರ್.ಆಶೋಕ್‌ ಹೇಳಿದ್ದಾರೆ.